ಮೂಡುಬಿದಿರೆ ಶ್ರೀ ಯಕ್ಷನಿಧಿಯಿಂದ ಆಟಿದ ಲೇಸ್
ಮೂಡುಬಿದಿರೆ: ಶ್ರೀ ಯಕ್ಷನಿಧಿ ಮೂಡುಬಿದಿರೆ (ರಿ)
ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ ಇದರ ವತಿಯಿಂದ ಆಟಿದ ಲೇಸ್ ಕಾರ್ಯಕ್ರಮ ಭಾನುವಾರ ನಡೆಯಿತು.
ಹಿರಿಯ ಸಾಹಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ಇದರ ಕಾರ್ಯದರ್ಶಿ ಸದಾನಂದ ನಾರಾವಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಹಿರಿಯರು ಆಟಿಯನ್ನು ಆಚರಣೆಯನ್ನಾಗಿ ಮಾಡದೆ ಅದು ಅವರ ಜೀವನಕ್ರಮವೇ ಆಗಿತ್ತು. ಒಪ್ಪೊತ್ತು ಊಟಕ್ಕೂ ಕಷ್ಟವಿದ್ದ ಆ ದಿನಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಸೊಪ್ಪು, ಗೆಡ್ಡೆ ಗೆಣಸುಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುವುದರ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.
ಈ ಆಚರಣೆಯ ನೆಪದಲ್ಲಾದರೂ ಹಿಂದಿನ ಹಿರಿಯರ ಬದುಕಿನ ಬಗ್ಗೆ ಮತ್ತು ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ, ಆಹಾರ ವೈವಿದ್ಯತೆಯ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಅವಶ್ಯಕತೆಯಿದೆ ಎಂದರು ಆಟಿ ತಿಂಗಳ ಬಗ್ಗೆ ಸವಿವಾರವಾಗಿ ವಿವರಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಲತಾ ಸುರೇಶ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸಂಸ್ಥೆಯ ಗೌರವ ಅಧ್ಯಕ್ಷ ಸಿಎ ಬಾಲಕೃಷ್ಣ ಭಟ್, ಶೆಟ್ಟಿ ಚಿಕನ್ ಇದರ ಮಾಲಕ ನರೇಶ್ ಶೆಟ್ಟಿ ಬರಕಲಗುತ್ತು ಹಾಗು ಸಂಸ್ಥೆಯ ಉಪಾಧ್ಯಕ್ಷ ಹರಿಶ್ಚಂದ್ರ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಮೊದಲು ಸಂಸ್ಥೆಯ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು.
ಮಕ್ಕಳು ಮನೆಯಿಂದ ತಂದ ವಿವಿಧ ತುಳುನಾಡ ತಿನಿಸುಗಳೊಂದಿಗೆ ಸಹಭೋಜನ ನಡೆಯಿತು.
ಪ್ರತೀಕ್ ಸಾಲಿಯಾನ್ ಸ್ವಾಗತಿಸಿದರು. ಸಂಜೀವ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಪ್ರದ್ಯುಮ್ನ ಪೆಜಾತಾಯ ವಂದಿಸಿದರು.
0 Comments