ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ನಿಂದ 40ನೇ ಸೇವಾ ಯೋಜನೆ ರೂ 10,000 ಸಹಾಯಧನ ಹಸ್ತಾಂತರ

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ನಿಂದ 

40ನೇ ಸೇವಾ ಯೋಜನೆ ರೂ 10,000 ಸಹಾಯಧನ ಹಸ್ತಾಂತರ

ಮೂಡುಬಿದಿರೆ:  ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.) ಅಮನ ಬೆಟ್ಟು 

40ನೇ ಸೇವಾ ಯೋಜನೆ ರೂ 10,000 ಸಹಾಯಧನವನ್ನು ಅನಾರೋಗ್ಯ ಪೀಡಿತೆ ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ ಸಮಾಜ ಮಂದಿರದಲ್ಲಿ ಹಸ್ತಾಂತರಿಸಿತು.


ಮೂಡುಬಿದ್ರಿ ತಾಲೂಕಿನ ಹಜಂಕಾಲ ಬೆಟ್ಟು ಪ್ರಾಂತ್ಯ ಪರಿಸರದ ರೋಜಲಿನ್ ಡಿ. ಸೋಜಾ ಎಂಬವರಿಗೆ 35ವರ್ಷ ದ ಹಿಂದೆ ವಿಷದ ಹಾವು ಕಚ್ಚಿದ ಪರಿಣಾಮ ವಾಗಿ ಅವರ ಗಾಯ ಗುಣವಾಗದೆ ಈಗಲೂ ಖಾಸಗಿ ಆಸ್ಪತ್ರೆಯಲ್ಲಿ   2 ದಿನಕ್ಕೊಮ್ಮೆ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಹಾಗೂ ಅವರ ಬಲ ಕೈ ಕೂಡ ಮುರಿತ ಗೊಂಡು ತುಂಬಾ ಸಮಸ್ಯೆ ಯಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ. 


ಅವರ ಮನೆಯಲ್ಲಿ ಅವರನ್ನು ನೋಡಿಕೊಳ್ಳಲು ಅವರ ಸಂಬಂಧಿಕರು ಒಬ್ಬರನ್ನು ಬಿಟ್ಟು ಬೇರೆ ಯಾರೂ ಇಲ್ಲ. ಅವರ ಮನೆಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ದೈನಂದಿನ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಅವರ ಸಹಾಯಕ ಪರಿಸ್ಥಿತಿಗೆ ಮರುಗಿರುವ ಸಾಯಿ ಮಾರ್ನಾಡ್ ಸಂಸ್ಥೆಯು ಆಗಸ್ಟ್ ತಿಂಗಳ  ಸೇವಾ ಯೋಜನೆಯ ಮೂಲಕ ಸ್ಪಂದಿಸಿದೆ.

Post a Comment

0 Comments