ನೇತಾಜಿ ಬ್ರಿಗೇಡ್ ನಿಂದ ಸಾಧಕರಿಗೆ ಸನ್ಮಾನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

ನೇತಾಜಿ ಬ್ರಿಗೇಡ್ ನಿಂದ ಸಾಧಕರಿಗೆ ಸನ್ಮಾನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಮೂಡುಬಿದಿರೆ: ಉತ್ಸಾಹ ಮತ್ತು ಹೋರಾಟದ ಮನೋಭಾವದ ವ್ಯಕ್ತಿ ನೇತಾಜಿ ಅವರ ಹೆಸರನ್ನಿಟ್ಟುಕೊಂಡು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಸಂಸ್ಥೆ ನೇತಾಜಿ ಬ್ರಿಗೇಡ್ ನ ಕೆಲಸ ಕಾರ್ಯಗಳು ಶ್ಲಾಘನೀಯ ಎಂದು ಸಂಸದ ಬೃಜೇಶ್ ಚೌಟ ಹೇಳಿದರು.

 ಅವರು ನೇತಾಜಿ ಬ್ರಿಗೇಡ್ (ರಿ)  ಮೂಡುಬಿದಿರೆ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವುಗಳ  ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ, ಅಂಗಾಂಗ ದಾನ ಮಾಹಿತಿ ಮತ್ತು ನೋಂದಾವಣೆ, ಸಹಾಯಧನ ವಿತರಣೆ, ಸನ್ಮಾನ  ಹಾಗೂ ಗೌರವಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 ನೇತಾಜಿ ಬ್ರಿಗೇಡ್ ನ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದರು.

 ಮಾಜಿ ಸಚಿವ ಅಭಯಚಂದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಮನುಷ್ಯನ ಬದುಕಲ್ಲಿ ಸಾರ್ಥಕತೆ ಇರಬೇಕು. ಅದು ಸಮಾಜಮುಖಿ ಕೆಲಸಗಳಿಂದ ಮಾತ್ರ ಸಾಧ್ಯ ಇಂತಹ ಕೆಲಸಗಳನ್ನು ಮಾಡುತ್ತಾ ಬಂದಿರುವ ನೇತಾಜಿ ಬ್ರಿಗೇಡ್ ಸಂಘಟನೆಗೆ ಇನ್ನೂ ಹೆಚ್ಚಿನ ಸಹಕಾರ ನೀಡುವ ಶಕ್ತಿ ಎಂದು ಶುಭ ಹಾರೈಸಿದರು.


  ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಾದ ಯುವರಾಜ್ ಜೈನ್ (ಶಿಕ್ಷಣ,)

ಅರ್ಜುನ್ ಭಂಡಾರ್ಕರ್ (ಸಮಾಜ ಸೇವಕ),  ರಜನಿ ಶೆಟ್ಟಿ (ಸಮಾಜ ಸೇವೆ),ಶಾಂತಿರಾಜ್ ಜೈನ್,  ರಘುವೀರ್ (ಅಮ್ಮೀ ಅಣ್ಣಾ), ಕಲ್ಯಾಣಿ ಶೆಟ್ಟಿ ಬೀರಾವು (ಉದ್ಯಮ),

 ಪ್ರಶಾಂತ್ ಶೆಟ್ಟಿ ಮರ್ನಾಡ್ (ಸಮಾಜ ಸೇವೆ)

ಶ್ರೀಮತಿ ಸಂಧ್ಯಾ ಭಟ್  (ಶೂನ್ಯ ತ್ಯಾಜ್ಯದ ರೂವಾರಿ),

ದಿನೇಶ್ ಶೆಟ್ಟಿಗಾರ್ ಕೊಡಪಡವು, ಸುಂದರ್ ರೈ ಬಂಗಾಡಿ, ರವಿಚಂದ್ರ ಕನ್ನಡಿ ಕಟ್ಟೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಲಾವಕುಮಾರ್(ಯಕ್ಷಗಾನ)

ಶ್ಯಾಮ್ ಸುಂದರ್ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ ( ಸಮಾಜ ಸೇವೆ), ಮಣಿ ಕೋಟೆಬಾಗಿಲು (ರಂಗಭೂಮಿ) ಅವರನ್ನು  ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸಮಾಜಮುಖಿ ಸೇವೆಗೈಯ್ಯುತ್ತಿರುವ ವಿವಿಧ ಸಂಘಟನೆಗಳನ್ನು ಗುರುತಿಸಲಾಯಿತು.


 ಸಹಾಯಧನ ವಿತರಣೆ : ಅನಾರೋಗ್ಯಕ್ಕೀಡಾದ 9 ಕುಟುಂಬಗಳಿಗೆ ರೂ 67,500 ಸಹಾಯಧನವನ್ನು  ವಿತರಿಸಲಾಯಿತು. 


 ವಿವಿಧ ವಿಭಾಗದ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ನೇತಾಜಿ ಬ್ರಿಗೇಡ್ ಕಳೆದ ನಾಲ್ಕು ವರ್ಷಗಳಿಂದ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು 142 ವಾರಗಳ ಸ್ವಚ್ಛತಾ ಅಭಿಯಾನ, ಜಾತ್ರಾ ಮಹೋತ್ಸವ, ಕಂಬಳಗಳಲ್ಲಿ ವಿಶೇಷ ವೇಷಗಳನ್ನು ಧರಿಸಿರುವವರನ್ನು ಗುರುತಿಸಿ ಗೌರವಿಸಲಾಯಿತು.


 ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಪುರಸಭಾ ಸದಸ್ಯ ರಾಜೇಶ್ ನಾಯ್ಕ್,  ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ರಾಜ್ಯ ಕ್ರೈಸ್ತ ನಿಗಮನ ಮಾಜಿ ಅಧ್ಯಕ್ಷ ಜೋಯ್ಲಸ್ ತಾಕೋಡೆ, ಬಿಜೆಪಿ ಮಂಡಲ ಕಾರ್ಯದರ್ಶಿ ರಂಜಿತ್ ಪೂಜಾರಿ, ವಕೀಲರಾದ ಶಾಂತಿಪ್ರಸಾದ್ ಹೆಗ್ಡೆ, ಎಂ.ಎಸ್.ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.

ನೇತಾಜಿ ಬ್ರಿಗೇಡ್ ನ ಸಂಸ್ಥಾಪಕ ರಾಹುಲ್ ಕುಲಾಲ್ ಸ್ವಾಗತಿಸಿದರು. ಕ್ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಂತರ ದಿನೇಶ್ ಕೋಡಪದವು ಮತ್ತು ತಂಡದವರಿಂದ ಯಕ್ಷ ಹಾಸ್ಯ ವೈಭವ ನಡೆಯಿತು.


Post a Comment

0 Comments