ಅಂಬೇಡ್ಕರ್ ಜನ್ಮದಿನಾಚರಣೆ, ಡೀಕಯ್ಯರಿಗೆ ನುಡಿನಮನ

ಜಾಹೀರಾತು/Advertisment
ಜಾಹೀರಾತು/Advertisment

 ಅಂಬೇಡ್ಕರ್ ಜನ್ಮದಿನಾಚರಣೆ,

ಡೀಕಯ್ಯರಿಗೆ ನುಡಿನಮನ 


 ಮೂಡುಬಿದಿರೆ :ತುಲುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ) ಕೇಂದ್ರ ಸಮಿತಿ ಇದರ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ  ನಡೆದ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಇವರ ೧೩೪ ನೇ ಹುಟ್ಟು ಹಬ್ಬದ ಆಚರಣೆ ಮತ್ತು ಬಹುಜನ ನಾಯಕ ದಿ| ಪಿ. ಡೀಕಯ್ಯ ಅವರ ನುಡಿ ನಮನ ಕಾರ್ಯಕ್ರಮ  ನಡೆಯಿತು. 


ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ 

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂವಿಧಾನದಲ್ಲಿ ಹಿಂದೂ ಕೋಡ್‌ಬಿಲ್ ಎಂಬ ಕಾನೂನನ್ನು ರೂಪಿಸಿರುವುದರಿಂದ ದೇಶದಲ್ಲಿ ಮಹಿಳೆಯರು ಸ್ವಾಭಿಮಾನದಿಂದ, ಗೌರವದಿಂದ ಬದುಕುವಂತಾಗಿದೆ ಎಂದರು. 


  ತುಳುನಾಡ್ ಮನ್ಸ ಸಮಾಜ ಸೇವಾ ಸಂಘ (ರಿ.) ಇದರ ಗೌರವ ಸಲಹೆಗಾರ ಅಚ್ಯುತ ಸಂಪಿಗೆ ಮಾತನಾಡಿ ಮನ್ಸ ಜಾತಿಯ ಹೆಸರನ್ನು ಸರಕಾರದ ಪ. ಜಾತಿ ಪಟ್ಟಿಯಲ್ಲಿ ಸೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಮುದಾಯವು ಗಂಭೀರ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿ ಮುಂದಿನ ನಮ್ಮ ಹೋರಾಟಗಳಿಗೆ ಎಲ್ಲ ಮನ್ಸ ಜಾತಿಯ ಜನರ ಸಹಕಾರ ನೀಡುವಂತೆ ಕೋರಿದರು. 

ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ ಅಕಾಡೆಮಿಯ ವತಿಯಿಂದ ಡೀಕಯ್ಯರವರ ಕಿರು ಪರಿಚಯ ಮತ್ತು ಅವರ ಹೋರಾಟದ ಪುಸ್ತಕವನ್ನು ಪ್ರಕಟಿಸುವುದಾಗಿ ಮತ್ತು "ದುಡಿ ಕುಣಿತ"ದ ದಾಖಲೀಕರಣವನ್ನು ಮಾಡುವುದಾಗಿ ಆಶ್ವಾಸನೆಯಿತ್ತರು. ಧಾರವಾಡ ಕರ್ನಾಡಕ ವಿಶ್ವವಿದ್ಯಾಲಯದ ಮಾನವ ಶಾಸ್ತ್ರೀಯ ಅಧ್ಯಯನ ವಿಭಾಗದ ಡಾ. ಸದಾನಂದ ಸುಗಂಧಿ ಮಾತನಾಡಿ ಡೀಕಯ್ಯರವರ ಒಡನಾಟದ ನೆನಪನ್ನು ಹಂಚಿಕೊಂಡರು.

         ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿದರು. ಈ ಬಾರಿಯ ಎಸ್ ಎಸ್ ಎಲ್ ಸಿ. ಪಿಯುಸಿ. ಡಿಗ್ರಿ ಮತ್ತು  ಪರೀಕ್ಷೆಯಲ್ಲಿ ೭೦% ಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಯ್ಕೆಯಾದ ಸಮಾಜದ ೨೫ ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು ಜನಾಂಗದ ಕೆಲವು ಸಾಧಕರನ್ನು ಸನ್ಮಾನಿಸಲಾಯಿತು. ಡೀಕಯ್ಯರ ಪತ್ನಿ ಆತ್ರಾಡಿ ಅಮೃತಾ ಉಪಸ್ಥಿತರಿದ್ದರು. 

ಅತಿಥಿಗಳಾಗಿ ಧಾರ್ಮಿಕ ದತ್ತಿ ಇಲಾಖೆಯ ನಾಮ ನಿರ್ದೇಶಿತ ಸದಸ್ಯ ಹರಿಯಪ್ಪ ಮುತ್ತೂರು ಭಾಗವಹಿಸಿದರು. ತುಳುನಾಡಿನ ಮನ್ಸರ ಸಾಂಸ್ಕೃತಿಕ ಬದುಕಿನ ಜೀವಾಳವಾಗಿದ್ದ ದುಡಿ ಕುಣಿತದ ಪ್ರಾತ್ಯಕ್ಷತೆ ನಡೆಸಿ ದುಡಿ ಕುಣಿತದವರನ್ನು ಗೌರವಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಂಕಣ್ಣ ಕೊಯ್ಯರು ವಹಿಸಿದ್ದರು. ನಿತಿನ್ ಮುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಕೇಶ ಮಾಲಾಡಿ ನಿರೂಪಿಸಿದರು, ಶಾಲಿನಿ ಆರ್ ಸ್ವಾಗತಿಸಿದರು, ಸುಜಾತಾ ಗೋಳಿಯಂಗಡಿ ವಂದಿಸಿದರು.

Post a Comment

0 Comments