ಕೊಂಕಣಿ ಸಾಹಿತ್ಯ ಅಕಾಡೆಮಿ: ಸಹ ಸದಸ್ಯನಾಗಿ ಶ್ರೀನಿವಾಸ ಗೌಡ ಆಯ್ಕೆ
ಮೂಡುಬಿದಿರೆ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹ ಸದಸ್ಯನಾಗಿ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮದ ಕುಡುಬಿ ಸಮಾಜದ ಯುವಕ ಕಂಬಳ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಂಕೋಲಾದ ಮದ್ಯಖಾರ್ವಿ ವಾಡಾದ ಖಾರ್ವಿ ಮುಖಂಡ ಜಗದೀಶ್ ಯಶ್ವಂತ್, ಉಡುಪಿ ಶಿರೂರಿನ ಕೊಂಕಣಿ ದಾಲ್ದಿ ಸಮುದಾಯದ ಸಾಹಿತಿ ಹಾಗೂ ಸಂಘಟಕ ಮಾಮ್ದು ಇಬ್ರಾಹಿಂ ಹಾಗೂ ಕುಡುಬಿ ಸಮುದಾಯದ ಶ್ರೀನಿವಾಸ ಗೌಡ ಅವರನ್ನು ಕೊಂಕಣಿಯ ವಿವಿಧ ಸಮುದಾಯದ ಪ್ರತಿನಿಧಿಯಾಗಿ ಸಹ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗೂ ರಾಜ್ಯ ಸರಕಾರವು ನೀಡುವ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
0 Comments