ಜೈನ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಮೂಡುಬಿದಿರೆಯ ಜೈನ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ನಿವೃತ್ತ ಯೋಧ ಸಾರ್ವಜನಿಕ ಅಶೋಕ್ ಪ್ರಭು ಅವರು ವಿದ್ಯಾರ್ಥಿಗಳಿಗೆ ಕಾರ್ಗಿಲ್ ಯುದ್ಧದ ಬಗ್ಗೆ ಮಾಹಿತಿಯನ್ನು ನೀಡಿದರು ಹಾಗೂ ಸೈನ್ಯವನ್ನು ಸೇರುವುದು ಹೇಗೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು ಹಾಗೂ 25 ನೆಯ ಕಾರ್ಗಿಲ್ ವಿಜಯ ದಿವಸ್ ಅನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶ್ಯಾಮಪ್ರಸಾದ ರವರು ವಹಿಸಿದ್ದರು ಕಾರ್ಯಕ್ರಮವನ್ನು ಎನ್ಸಿಸಿ ವಿಭಾಗದ ಅಧಿಕಾರಿಗಳಾದ ಥರ್ಡ್ ಆಫೀಸರ್ ನಿತೇಶ್ ಕುಮಾರ್ ಹಾಗೂ ಚೀಫ್ ಆಫೀಸರ್ ವಿನಯಚಂದ್ರ ಮತ್ತು ಶ್ರೀ ನವೀನ್ ಬಂಗೇರ ಅವರು ಸಂಘಟಿಸಿದ್ದರು.
0 Comments