ನೆಲ್ಲಿಕಾರಿನಲ್ಲಿ ಭಾರೀ ಗಾಳಿ, ಮಳೆ : ಧರೆಗುರುಳಿದ ಮರಗಳು

ಜಾಹೀರಾತು/Advertisment
ಜಾಹೀರಾತು/Advertisment

 ನೆಲ್ಲಿಕಾರಿನಲ್ಲಿ ಭಾರೀ ಗಾಳಿ, ಮಳೆ : ಧರೆಗುರುಳಿದ ಮರಗಳು

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆಯಲ್ಲಿ ಶುಕ್ರವಾರ ಬೀಸಿದ ಭಾರಿ ಗಾಳಿಗೆ ಹಲವಾರು ಮರಗಳು ಧರೆಗುರುಳಿ ಅಪಾರ ನಷ್ಟ ಸಂಭವಿಸಿದೆ.

 ಬೋರುಗುಡ್ಡೆಯಲ್ಲಿರುವ ಗ್ರಾಮ ವನ್ ಸೈಬರ್‌ನ ಮಾಡು ಮತ್ತು ಸ್ಥಳೀಯ ಟ್ರಾನ್ಸ್‌ಫರ್ ಕಂಬವೊಂದರ ಮೇಲೆ ಮರ ಉರುಳಿ ನಷ್ಟ ಉಂಟಾಗಿದೆ.


 ಸ್ಥಳೀಯ ಪಣಪಿಲ ಸಂಪರ್ಕಿಸುವ ಮಾರ್ಗದ ಮೇಲೂ ಮರಗಳು ಉರುಳಿ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.


ಊರವರು ಮೆಸ್ಕಾಂ ಮತ್ತು ಅರಣ್ಯ ಸಿಬ್ಬಂದಿಗಳು  ಮರಗಳ ತೆರವಿಗೆ ಪ್ರಯತ್ನ ನಡೆಸುತ್ತಿದ್ದಾರೆ.

Post a Comment

0 Comments