ಸೈಕಲ್ ಗೆ ಕಾರು ಢಿಕ್ಕಿ: ಸವಾರ ಸಾವು
ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಪುತ್ತಿಗೆ ಪದವು ಹಂಡೇಲು ಮಸೀದಿ ಬಳಿ ಶುಕ್ರವಾರ ಸಾಯಂಕಾಲ ಕಾರೊಂದು ಸೈಕಲ್ ಗೆ ಡಿಕ್ಕಿಯಾಗಿ ಸೈಕಲ್ ಸವಾರ,ಪಂಪ್ ಆಪರೇಟಿವ್ ರಮೇಶ್ ಅಂಚನ್(56) ಮೃತಪಟ್ಟ ಘಟನೆ ನಡೆದಿದೆ.
ಸಾಯಂಕಾಲ 6.30ರ ವೇಳೆ ರಮೇಶ್ ಅವರು ಸೈಕಲ್ ನಲ್ಲಿ ಹೋಗುತ್ತಿರುವಾಗ ಕಲ್ಲಮುಂಡ್ಕೂರು ಕಡೆಯಿಂದ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ತಲೆ, ಕಾಲಿಗೆ ತೀವ್ರ ತರಹದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ರಮೇಶ್ ಅವರು ಹಲವು ವರ್ಷಗಳ ಹಿಂದೆ ಮೂಡುಬಿದಿರೆ ಮಾರುಕಟ್ಟೆ ಸಂತೆಯಲ್ಲಿ ತಿಂಡಿ ತಿನಿಸುಗಳನ್ನು ಮಾರುತ್ತಿದ್ದು, ಸ್ಥಳೀಯವಾಗಿ ‘ಚಕ್ಕುಲಿ ರಮೇಶಣ್ಣ’ ಎಂದು ಹೆಸರುವಾಸಿಯಾಗಿದ್ದರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ತನಿಖೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
0 Comments