ಬೆಳಗಾವಿಯ ವ್ಯಕ್ತಿ ಮೂಡುಬಿದಿರೆಯಲ್ಲಿ ಕಾಣೆ

ಜಾಹೀರಾತು/Advertisment
ಜಾಹೀರಾತು/Advertisment
ಬೆಳಗಾವಿಯ ವ್ಯಕ್ತಿ ಮೂಡುಬಿದಿರೆಯಲ್ಲಿ ಕಾಣೆ 
ಮೂಡುಬಿದಿರೆ: ಬೆಳಗಾವಿಯ ವ್ಯಕ್ತಿಯೊಬ್ಬರು ಮೂಡುಬಿದಿರೆಯಲ್ಲಿ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳಗಾವಿಯ ರಾಯಬಾಗ್ ತಾಲ್ಲೂಕಿನ ಮುಗುಳಕೋಡ್ ಗ್ರಾಮದ ಸಿದ್ದಪ್ಪ ಮಾನಶೇಟ್ಟಿ(45)ಕಾಣೆಯಾದ ವ್ಯಕ್ತಿ. ಇವರು ಫೆ.21ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಪರೀಕ್ಷೆ ಬರೆಯಲು ತನ್ನಿಬ್ಬರು ಮಕ್ಕಳನನ್ನು ಊರಿನಿಂದ ಮೂಡುಬಿದಿರೆಗೆ ಕರೆದುಕೊಂಡು ಬಂದಿದ್ದರು. ತನಗೆ ಸ್ವಲ್ಪ ಕೆಲಸ ಇದೆ ಎಂದು ಮೂಡುಬಿದಿರೆಯುಲ್ಲಿ ಉಳಿದಿದ್ದ ಸಿದ್ಧಪ್ಪ ಪರೀಕ್ಷೆ ಬರೆದ ಮಕ್ಕಳನ್ನು ಊರಿಗೆ ಬಸ್ಸ್ ಹತ್ತಿಸಿ ಊರಿಗೆ ಕಳಿಸಿದ್ದ. ಕೆಲವು ದಿನಗಳಾದರೂ ಸಿದ್ದಪ್ಪ ಊರಿಗೆ ಹಿಂತಿರುಗಲಿಲ್ಲ ಎನ್ನಲಾಗಿದೆ. ಅವರ ಮೊಬೈಲ್ ಸ್ವಿಚ್ಚ್ಡ್ ಆಫ್ ಆಗಿದೆ.. ಈತನಿಗಾಗಿ ಮನೆಯವರು ಹುಡುಕಾಡಿ ಸಿಗದೇ ಇದ್ದಾಗ ಅವರ ಸಂಬಂಧಿ ಮಲ್ಲಪ್ಪ ಮೂಡುಬದಿರೆ ಪೆÇಲೀಸರಿಗೆ ದೂರು ನೀಡಿದ್ದಾರೆ. ಇವರು ದಪ್ಪ ಮೈಕಟ್ಟು, ಕಪ್ಪುಬಣ್ಣವನ್ನು ಹೊಂದಿದ್ದು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಇವರ ಬಗ್ಗೆ ಮಾಹಿತಿ ಇದ್ದರೆ ಮೂಡುಬಿದಿರೆ ಪೆÇಲೀಸರನ್ನು ಸಂಪಕರ್uಟಿಜeಜಿiಟಿeಜಸುವಂತೆ ತಿಳಿಸಲಾಗಿದೆ.

Post a Comment

0 Comments