ಸಿರಿ ಧಾನ್ಯಗಳ ಬಳಕೆ ಹೆಚ್ಚಿಸಿ : ಶಿಕ್ಷಕಿ ಅನಿತಾ ಶೆಟ್ಟಿ
ಮೂಡುಬಿದಿರೆ: ಮಹಿಳೆಯರಲ್ಲಿ ವಿಶೇಷವಾಗಿ ಕೊರತೆಯಾಗುವ ಕ್ಯಾಲ್ಸಿಯಂ ಪ್ರಮಾಣದ ಸರಿದೂಗಿಸುವಿಕೆಗೆ ಪೂರಕವಾದ ಆಹಾರ ಪದಾರ್ಥಗಳು ಅವಶ್ಯಕ. ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಿದರೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ ಎಂದು ಮಿಜಾರ್ ಪ್ರೌಢ ಶಾಲೆಯ ಶಿಕ್ಷಕಿ ಅನಿತಾ ಶೆಟ್ಟಿ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಕೋಡಂಗಲ್ಲುವಿನ ಮೈತ್ರಿ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆದ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಸೇವನೆಯ ಮಹತ್ವ, ಮನೆ ಅಂಗಳದಲ್ಲಿ ಕಾಣಸಿಗುವ ಸೊಪ್ಪು ತರಕಾರಿಗಳನ್ನು ಬಳಸಿ ಮಾಡಬಹುದಾದ ಕೆಲವೊಂದು ಖಾದ್ಯಗಳಿಂದಾಗುವ ಔಷಧೀಯ ಲಾಭಗಳನ್ನು ತಿಳಿಸಿಕೊಟ್ಟರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್ ಕಾರ್ಯಕ್ರಮವನ್ನು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಯಾಗಿ ತುಳಸಿ ಕೋಚಿಂಗ್ ಸೆಂಟರ್ ಮಮತಾ ಅವರು ಭಾಗವಹಿಸಿ ಮಾತನಾಡಿ ಇಂದಿನ ನಮ್ಮ ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯದ ಮೇಲಾಗುತ್ತಿರುವ ದುಷ್ಪಾರಿಣಾಮಗಳ ಬಗ್ಗೆ ತಿಳಿಸಿದರು.
ಒಕ್ಕೂಟದ ಕಾರ್ಯದರ್ಶಿ ಸಂದೀಪ್, ವಲಯದ ಮೇಲ್ವೀಚಾರಕ ವಿಠ್ಠಲ್, ಸೇವಾ ಪ್ರತಿನಿಧಿ ಮಮತಾ, ಉಪಾಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.
ಸದಸ್ಯೆ ಶುಭಾಸಿನಿ ಸ್ವಾಗತಿಸಿ, ರಮ್ಯ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯಧಿಕಾರಿ ವಿದ್ಯಾ ಧನ್ಯವಾದವಿತ್ತರು.
0 Comments