ಮೂಡುಬಿದಿರೆಯಲ್ಲಿ ಸುರಿವ ಮಳೆಯ ಮಧ್ಯೆ ಕಾಂಗ್ರೆಸ್ ವಿರುದ್ದ ಪ್ರತಿಭಟಿಸಿದ ಬಿಜೆಪಿ
ಮೂಡುಬಿದಿರೆ: ಅನೇಕ ವರ್ಷಗಳಿಂದ ಶಾಲಾ ಮೈದಾನಗಳಲ್ಲಿ ನಡೆಯುತ್ತಿದ್ದ ಹಿಂದೂ ಧಾರ್ಮಿಕ ಆಚರಣೆಗಳಾದ ಗಣೇಶೋತ್ಸವ, ಮೊಸರು ಕುಡಿಕೆ ಉತ್ಸವವನ್ನು ಮುಂದಕ್ಕೆ ನಡೆಸದಂತೆ ಆದೇಶಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಸೋಮವಾರ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
,ಬಿಜೆಪಿ ಮುಖಂಡ ಈಶ್ವರ್ ಕಟೀಲ್ ಮಾತನಾಡಿ ಹಿಂದೂ ಧಾರ್ಮಿಕ ಚಟುವಟಿಕೆ ವಿರೋಧಿಸಿ ಕಾಂಗ್ರೆಸ್ ನಡೆಸುವ ಆದೇಶ ದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಹೆಚ್ಚು ಸಮಯ ಬಾಳದು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶಾಂತಿ ಪ್ರಸಾದ್ ಹೆಗ್ಡೆ ಕ್ಷೇತ್ರಾಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್, ಯುವಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮಹಿಳಾ ಮೋರ್ಚಾ.ಅಧ್ಯಕ್ಷೆ ಗೀತಾ ಲಕ್ಷ್ಮಿ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಪ್ರದೀಪ್ ಕುಮಾರ್, ರೈತರ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್,, ನಾಗವರ್ಮ ಜೈನ್, ಲಕ್ಷ್ಮಣ ಪೂಜಾರಿ, ಅಶ್ವಥ್ ಪನಪಿಲ, ಗೋಪಾಲ ಶೆಟ್ಟಿಗಾರ್, ನಾಗರಾಜ ಪೂಜಾರಿ, ಕೇಶವ ಕರ್ಕೇರ, ಸೋಮನಾಥ ಕೋಟ್ಯಾನ್, ಭರತ್ ಶೆಟ್ಟಿ ಬೆಳುವಾಯಿ, ಅಭಿಲಾಷ್ ಶೆಟ್ಟಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ, ಮೂಲ್ಕಿ-ಮೂಡುಬಿದಿರೆ ಘಟಕದ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಿಜೆಪಿಗರು ಭಾರೀ ಮಳೆಯನ್ನು ಕೂಡ ಲೆಕ್ಕಿಸದೆ ನೆನೆದು ಕೊಂಡೆ ಬೃಹತ್ ಪ್ರತಿಭಟನೆ ನಡೆಸಿದರು.
0 Comments