*ಐ.ಸಿ.ವೈ.ಎಮ್. ಸಂಪಿಗೆ ಘಟಕದ ವತಿಯಿಂದ ‘ಪಾವ್ಸಾ ಗಮ್ಮತ್ತ್’ ಕಾರ್ಯಕ್ರಮ
ಮೂಡುಬಿದಿರೆ: ಐ.ಸಿ.ವೈ.ಎಮ್. ಸಂಪಿಗೆ ಘಟಕದ ವತಿಯಿಂದಮಳೆಗಾಲದ ಆಹಾರ ಪದಾರ್ಥಗಳ ವಿಶಿಷ್ಟ ಕಾರ್ಯಕ್ರಮ ‘ಪಾವ್ಸಾ ಗಮ್ಮತ್ತ್’ ಎಂಬ ಕಾರ್ಯಕ್ರಮವನ್ನು ಹೋಲಿ ಸ್ಪಿರಿಟ್ ಚರ್ಚ್ ಸಂಪಿಗೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಸಂಪಿಗೆ ಚರ್ಚ್'ನ ಧರ್ಮ ಗುರು ವಂದನೀಯ ವಿನ್ಸೆಂಟ್ ಡಿಸೋಜಾ ಪಾವ್ಸಾ ಗಮ್ಮತ್ತ್ ಮತ್ತು ಅದಕ್ಕೆ ಸಂಬಂಧಿಸಿದ ಸಂಪ್ರದಾಯದ ಮಹತ್ವದ ಬಗ್ಗೆ ಮಾತನಾಡಿ ಇಂತಹ ವಿಶಿಷ್ಟ ಮತ್ತು ಅದ್ಭುತವಾದ ಕಾರ್ಯಕ್ರಮವನ್ನು ಶ್ಲಾಘಿಸಿದರು.
20ಕ್ಕೂ ಅಧಿಕ ಮಳೆಗಾಲದ ಆಹಾರ ಪದಾರ್ಥಗಳನ್ನು ತಯಾರಿಸಿದ ಪ್ರತಿಯೊಬ್ಬರಿಗೂ ಹಾಗೂ ಈ ಕಾರ್ಯಕ್ರಮದ ಯಶಸ್ಸಿಗೆ ಧನ ಸಹಾಯ ನೀಡಿದವರಿಗೆ ಗುರುಗಳು ಹೂ ನೀಡಿ ಗೌರವಿಸಿದರು.
ಐ.ಸಿ.ವೈ.ಎಮ್. ಮೂಡುಬಿದಿರೆ ವಲಯದ ಉಪಾಧ್ಯಕ್ಷ ರೊಲ್ಸನ್ ರೊಡ್ರಿಗಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿಲ್ಫ್ರೇಡ್ ಮಿಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಅಧ್ಯಕ್ಷ ಮೆಲ್ರೋಯ್ ಮೋರಾಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಚೇತಕರಾದ ವಿಪಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಐ.ಸಿ.ವೈ.ಎಮ್. ಸಂಪಿಗೆ ಘಟಕದ ಖಜಾಂಜಿ ಕ್ಲೇರಿ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು.
ಘಟಕದ ಉಪಾಧ್ಯಕ್ಷೆ ಜೋಯ್ಲಿನ್ ಕೊರ್ಡೆರೋ ತಂಡದವರು ಪ್ರಾರ್ಥಿಸಿದರು.ಸದಸ್ಯೆ ರಿಯೋನಾ ಕಾರ್ಡೋಜಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜೊನಿಟ ರೊಡ್ರಿಗಸ್ ವಂದನೆ ಸಲ್ಲಿಸಿದರು.
200 ಕ್ಕೂ ಅಧಿಕ ಮಂದಿ ಈ ಆಹಾರ ಪದಾರ್ಥಗಳ ರುಚಿಯನ್ನು ಸವಿದರು.
0 Comments