ಮೂಡುಬಿದಿರೆ : ಪ್ರಗತಿಪರ ಕೃಷಿಕ, ತಾಲೂಕಿನ ದರೆಗುಡ್ಡೆ ಪಡ್ಯೊಟ್ಟು ಅರಮನೆಯ ಬಿ. ಜಯರಾಜ್ (82ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ.
ಅವರು ಈರ್ವರು ಪುತ್ರಿಯರಾದ ರಕ್ಷಾ ಮತ್ತು ರಚನಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ 3ದಶಕಗಳಿಂದ ಸದಸ್ಯರಾಗಿ, ಅಧ್ಯಕ್ಷರಾಗಿ, ಹಾಲಿ ಉಪಾಧ್ಯಕ್ಷರಾಗಿ ಮೂಡುಬಿದಿರೆ ಡಿಜೆ ವಿವಿ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ, ದರೆಗುಡ್ಡೆ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ.
ದರೆಗುಡ್ಡೆ ಗ್ರಾಮ ಪಂಚಾಯತ್‌ಗೆ ಒಂದು ಅವಧಿಯ ಸದಸ್ಯರಾಗಿದ್ದ ಅವರು ಗ್ರಾಮದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದರು.
ಜಯರಾಜ್‌ರವರ ನಿಧನದ ಸುದ್ಧಿ ತಿಳಿಯುತ್ತಿದ್ದಂತೆ ಡಿಜೆ ವಿವಿ ಸಂಘದ ಆಡಳಿತಕ್ಕೊಳಪಟ್ಟ ಶಾಲೆಗಳಿಗೆ ರಜೆ ನೀಡಲಾಗಿತ್ತು. ಬೆಳುವಾಯಿ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಹಾಗೂ ನಿರ್ದೇಶಕರುಗಳು ಮತ್ತು ಡಿಜೆ ಸಂಘದ ಸಂಚಾಲಕರು ಹಾಗೂ ಸದಸ್ಯರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
0 Comments