ಚಿಕ್ಕಮಗಳೂರು ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಂಸದರ ಸಭೆ:ಜುಲೈ 5ಕ್ಕೆ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊಬೈಲ್ ಟವರ್ ಸಮಸ್ಯೆಗಳ ಬಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿರವರು ಬಿ.ಎಸ್.ಎನ್.ಎಲ್ ನ ಹಿರಿಯ ಅಧಿಕಾರಿಗಳೊಂದಿಗೆ ಇಂದು ಬೆಂಗಳೂರಿನ ತಮ್ಮ ಗೃಹ ಕಛೇರಿಯಲ್ಲಿ ಪೂರ್ವಬಾವಿ ಸಭೆ ನಡೆಸಿದರು. ಸಭೆಯಲ್ಲಿ ಬಿ.ಎಸ್.ಎನ್.ಎಲ್ ನ ಹಿರಿಯ ಅಧಿಕಾರಿಗಳಾದ, ಸುಜಿತ್ ಕುಮಾರ್, ಪ್ರಿನ್ಸಿಪಲ್ ಜನರಲ್ ಮ್ಯಾನೆಜರ್, ಅಲ್‌ಖೇಶ್ ದೇಸಾಯಿ. ಅಡಿಷನಲ್ ಜನರಲ್ ಮ್ಯಾನೆಜರ್, ಎಸ್. ಪಿ ಜಗದಾಳೆ, ಡೆಪ್ಯೂಟಿ ಜನರಲ್ ಮ್ಯಾನೆಜರ್, ಅನಂದ ಕೃಷ್ಣಾ, ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಹಾಗೂ ಕೆ.ಆರ್. ಧರ್ಮಪ್ಪ ಸಂಸದರ ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಅಧಿಕಾರಿಗಳು ಎಲ್ಲಾ ತಾಲೂಕುವಾರು ಟವರ್‌ಗಳ ಸಮಸ್ಯೆ ಬಗ್ಗೆ ಮಾಹಿತಿ ಒದಗಿಸಿ ರಾಷ್ಟ್ರೀಯ ಹೆದ್ದಾರಿ ಅಗೆಯುವಿಕೆಯಿಂದ ಅಗುತ್ತಿರುವ ತೊಂದರೆ, ಟವರ್‌ಗಳಿಗೆ ವಿದ್ಯತ್ ಪೂರೈಸುವಲ್ಲಿ ಮೆಸ್ಕಾಂನಿಂದ ಅಗುತ್ತಿರುವ ಸಮಸ್ಯೆ, ಅರಣ್ಯ ಇಲಾಖೆಯ ಅನುಮತಿಯ ವಿಳಂಬದಿಂದ ಅಗುವ ತೊಡಕುಗಳ ಬಗ್ಗೆ ಮಾಹಿತಿ ನೀಡಿದರು.
ಅಧಿಕಾರಿಗಳು ಒದಗಿಸಿದ ಮಾಹಿತ ಆಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿರವರು ಕೂಡಲೇ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಜಿಲ್ಲಾಧಿಕರಾಗಿಗಳ ಸಮಕ್ಷಮದಲ್ಲಿ ದಿನಾಂಕ 05-07-24 ಶುಕ್ರವಾರದಂದು ಸಮಯ 3.00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಟವರ್‌ಗಳ ಸಮಸ್ಯೆ ಪರಿಹಾರದ ಕುರಿತು ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
0 Comments