ವನಮಹೋತ್ಸವ ಕಾರ್ಯಕ್ರಮ ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು
ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು ಮತ್ತು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ (ರಿ.) ಕುಪ್ಪೆಪದವು ಘಟಕ ಇವರ ಜಂಟಿ ಆಶ್ರಯದಲ್ಲಿ
ಯುವವಾಹಿನಿ (ರಿ.) ಕುಪ್ಪೆಪದವು ಘಟಕದ ಅಧ್ಯಕ್ಷರಾದ ಶ್ರೀ ಅಕ್ಷಿತ್ ಕುಮಾರ್ ಮತ್ತು ಶಾಲಾ ನಾಯಕಿ ಕು. ಸಾನ್ವಿ ಇವರು ಶಾಲಾ ಪರಿಸರದಲ್ಲಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಶಿಕ್ಷಕರಾದ ಶ್ರೀ ಮಾರ್ಕ್ ಮೆಂಡೊನ್ಸಾ, ಇವರು ಕಾರ್ಯಕ್ರಮದ ಉದ್ದೇಶ ಮತ್ತು ಅವಶ್ಯಕತೆಯನ್ನು ತಿಳಿಸುತ್ತಾ, ನಮ್ಮ ಮತ್ತು ಪರಿಸರದ ಸಂಬಂಧವನ್ನು ಗಟ್ಟಿಗೊಳಿಸಿದಾಗ ಪ್ರಕೃತಿಯ ಸಂರಕ್ಷಣೆಯಾಗುತ್ತದೆ. ಪ್ರತಿದಿನ ನಾವು ಪರಿಸರದ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಇದೆ ಮತ್ತು ಪ್ರಕೃತಿಯ ಉಳಿವಿನ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಕಾಯಕದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಕರೆ ನೀಡಿದರು.
ಸಂಘಟನೆಯ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಅಂಬೆಲೊಟ್ಟು, ಮಾಜಿ ಅಧ್ಯಕ್ಷರಾದ ಶ್ರೀ ಅಜಯ್ ಅಮೀನ್ ನಾಗಂದಡಿ, ಶ್ರೀ ಸತೀಶ್ ಕೆ. ಎಂ., ಶ್ರೀ ಜಗದೀಶ್ ದುರ್ಗಾಕೊಡಿ, ಕಾರ್ಯದರ್ಶಿ ಶ್ರೀಮತಿ ರೇಣುಕಾ ನಿಕಟಪೂರ್ವ ಅಧ್ಯಕ್ಷರಾದ ಸೌಮ್ಯಾ ಕೋಟ್ಯಾನ್, ಪರಿಸರ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿ (ಅರಣ್ಯ ಸಂರಕ್ಷಕ) ಮತ್ತು ಯುವವಾಹಿನಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.
0 Comments