ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿ
ಮೂಡುಬಿದಿರೆ: ಕಳೆದ 23 ವರ್ಷಗಳಿಂದ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಅಮನಬೆಟ್ಟುವಿನ ನಿವಾಸಿ ಚಂದ್ರಶೇಖರ ಅವರು ಶುಕ್ರವಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯನ್ನು ಹೊಂದಿದ್ದಾರೆ.
2001ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿದ್ದ ಅವರು ಬೆಳ್ತಂಗಡಿ, ಮೂಡುಬಿದಿರೆ ಮತ್ತು ಕಾರ್ಕಳದಲ್ಲಿ ಸೇವೆಯನ್ನು ಸಲ್ಲಿಸಿದ್ದರು.
ಇದೀಗ ಕಾರ್ಕಳದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಅವರು ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ.
0 Comments