ಜೈನ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ..
ಜೈನ್ ಪ್ರೌಢ ಶಾಲೆಯ NCC ವಾಯುದಳ.. ನೌಕಾ ದಳ ಹಾಗೂ ಭೂ ದಳ ಗಳ ವತಿಯಿಂದ ಯೋಗ ದಿನಾಚರಣೆ ನಡೆಸಲಾಯಿತು.
ಡಿ ಜೆ ವಿ ಸಂಘದ ಸದಸ್ಯರಾದ ಶ್ರೀ ಪೃಥ್ವಿರಾಜ್ ಶೆಟ್ಟಿ ಯವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಾಮಪ್ರಸಾದ್ ಉಪಸ್ಥಿತರಿದ್ದರು. NCC ಅಧಿಕಾರಿಗಳಾದ ನಿತೇಶ್ ಕುಮಾರ್ ಅಧ್ಯಾಪಕ ನವೀನ್ ಬಂಗೇರ ಹಾಗೂ ಶಾರೀರಿಕ ಶಿಕ್ಷಕ ವಿಕಾಸ್ ಜೈನ್ ಉಪಸ್ಥಿತರಿದ್ದರು.
ವಾಯು ದಳದ 45, ಭೂ ದಳದ 50 ಹಾಗೂ ನೌಕಾ ದಳದ 25 ಕೆಡೆಟ್ ಗಳು ಭಾಗವಹಿಸಿದ್ದರು.
ನೌಕಾದಳದ ಅಧಿಕಾರಿ ವಿನಯಚಂದ್ರ ಯೋಗ ಕಾರ್ಯಕ್ರಮ ನಡೆಸಿಕೊಟ್ಟರು.
0 Comments