ಬಿಜೆಪಿಯಿಂದ ದಿವಂಗತ ಡಾ.ಶ್ಯಾಮ್ ಪ್ರಸಾದ್ ಪುಣ್ಯಸ್ಮರಣೆ
ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಯುವ ಮೊರ್ಚಾ ಮುಲ್ಕಿ-ಮೂಡುಬಿದಿರೆ ಮಂಡಲದ ಸಭೆಯು ಮಂಡಲ ಯುವ ಮೊರ್ಚಾದ ಕುಮಾರ್ ಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಷ್ಟ್ರ ನಾಯಕ, ಜನಸಂಘದ ಸಂಸ್ಥಾಪಕರಾದ ದಿವಂಗತ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆಯ ದಿನದಂದು ಅವರಿಗೆ ಪುಪ್ಪರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಈ ಸಭೆಯಲ್ಲಿ ಮಂಡಲದ ಅಧ್ಯಕ್ಷರಾದ ದಿನೇಶ್ ಪುತ್ರನ್ ,ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ ಮತ್ತು ಹರಿಪ್ರಸಾದ್ ಶೆಟ್ಟಿ ಯುವ ಮೊರ್ಚಾದ ಪ್ರಭಾರಿಗಳಾದ ಪ್ರಮೋದ್ ದಿಡುಪೆ ಹಾಗೂ ಸಹಾ ಪ್ರಭಾರಿ ನಿತಿನ್ ಭಂಡಾರಿ, ಯುವ ಮೊರ್ಚಾದ ಪದಾಧಿಕಾರಿಗಳು ಭಾಗವಹಿಸಿದರು.
ಯುವ ಮೊರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಶೆಟ್ಟಿ ,ಪುರುಷೋತ್ತಮ್ ಸ್ವಾಗತಿಸಿದರು. ಉಮೇಶ್ ಮುಲ್ಕಿ ವಂದಿಸಿದರು.
0 Comments