ಜವನರ್ ಬೆದ್ರ ಫೌಂಡೇಶನ್ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ವೆಸ್ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ಮಹಾ ರಕ್ತದಾನ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಜವನರ್ ಬೆದ್ರ ಫೌಂಡೇಶನ್ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಜಿಲ್ಲಾ ಸರಕಾರಿ ವೆಸ್ಲಾಕ್ ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ಮಹಾ ರಕ್ತದಾನ ಶಿಬಿರ ನಡೆಯಿತು.

 

ನ್ಯಾಯವಾದಿ ಕೆ. ಆರ್. ಪಂಡಿತ್ ಶಿಬಿರವನ್ನು ಉದ್ಘಾಟಿಸಿದರು. 

ಎವರ್ ಕೇರ್ ಕ್ಲಿನಿಕ್ ನ ವೈದ್ಯ ಡಾ. ನಾರಾಯಣ ಪೈ ಬಿ., ನಿವೃತ್ತ ಸುಬೇದಾರ್ ಮೇಜರ್ ರಾಜೇಂದ್ರ ಜಿ., ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಉತ್ಕರ್ಷ್ ಮತ್ತು ಆ್ಯಂಟನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವನೆರ್ ಬೆದ್ರ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ  ಅಮರ್ ಕೋಟೆ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆಯ ರಕ್ತನಿಧಿಯು ಕಳೆದ 7 ವರ್ಷಗಳಿಂದ ಜಿಲ್ಲೆಯ ಹಾಗೂ ಹೊರ ಜಿಲ್ಲೆಯಲಿ ತುರ್ತು ರಕ್ತದ ಅವಶ್ಯಕತೆ ಸಂದರ್ಭದಲ್ಲಿ ರಕ್ತದಾನಿಗಳ ಸಹಕಾರದಿಂದ 10,000ಕ್ಕಿಂತಲೂ ಅಧಿಕ ಯೂನಿಟ್ ರಕ್ತವನ್ನು ಪೂರೈಸಿದೆ ಎಂದರು.  


 ಮಹಾ ರಕ್ತದಾನ ಶಿಬಿರದಲ್ಲಿ 137 ಜನ ತಮ್ಮ ಹೆಸರು ದಾಖಲಿಸಿದ್ದು 116 ರಕ್ತದಾನಿಗಳು ರಕ್ತದಾನ ಮಾಡಿದ್ದಾರೆ.

  ಪರಿಸರ ದಿನಾಚರಣೆ ಅಂಗವಾಗಿ ಎಲ್ಲ ರಕ್ತದಾನಿಗಳಿಗೆ, ಗಣ್ಯರಿಗೆ 150  ಸಸ್ಯಗಳನ್ನು ವಿತರಿಸಲಾಯಿತು ,ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಜವನೇರ ಬೆದ್ರ ಯುವ ಸಂಘಟನೆ  ಸಂಚಾಲಕ ನಾರಾಯಣ  ಪಡುಮಲೆ ವಂದಿಸಿದರು.


Post a Comment

0 Comments