ಅಪಘಾತಕ್ಕೀಡಾದ ಮಹಿಳೆಯ ಚಿಕಿತ್ಸೆಗೆ ಯುವ ಸಂಘಟನೆಗಳಿಂದ ಧನಸಂಗ್ರಹ
ಮೂಡುಬಿದಿರೆಯ ಹೌದಾಲ್ ಬಳಿಯಲ್ಲಿ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಣಪಿಲ ನಿವಾಸಿ ಜಯಂತಿಯವರ ಚಿಕಿತ್ಸೆಗಾಗಿ ಮೂಡುಬಿದಿರೆಯ ಪೇಟೆಯಲ್ಲಿ ಧನ ಸಂಗ್ರಹ ಅಭಿಯಾನವನ್ನು ಸಮಾನ ಮನಸ್ಕ ಸಂಘಟನೆಗಳು ನಡೆಸಿದವು.
ಮೂಡುಬಿದಿರೆಯ ಪ್ರತಿಷ್ಠಿತ ನವಚೇತನ ಸೇವಾ ಬಳಗ ತೋಡರ್ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯದಲ್ಲಿ ಬೊಳ್ಳಿ ಕಲಾವಿದೆರ್ ಬಜಗೋಳಿ ಹಾಗೂ ರಾಮ್ ಸೇನಾ ವಾಯುಪುತ್ರ ಘಟಕ ಕುಪ್ಪೆಪದವು ಇವರ ತಂಡ ಒಟ್ಟಾಗಿ ಭಾಗವಹಿಸಿ ಧನ ಸಂಗ್ರಹ ಮಾಡಿದ್ದಾರೆ.
0 Comments