ಮೂಡುಬಿದಿರೆಯಿಂದ ನೇಪಾಳ ಮೂಲದ ಬಾಲಕಿ ನಾಪತ್ತೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಿಂದ ನೇಪಾಳ ಮೂಲದ ಬಾಲಕಿ ನಾಪತ್ತೆ

ಮೂಡುಬಿದಿರೆ: ಶಿರ್ತಾಡಿ ಗ್ರಾ.ಪಂಚಾಯತ್ ವ್ಯಾಪ್ತಿಯ ಪಡುಕೊಣಾಜೆಯಲ್ಲಿ ವಾಸವಿದ್ದ ನೇಪಾಳ ಮೂಲದ ಅಪ್ರಾಪ್ತೆ ಬಾಲಕಿ ನಾಪತ್ತೆಯಾದ ಘಟನೆ ನಡೆದಿದೆ.

  ಸೆಕ್ಯೂರಿಟಿ ಗಾಡ್ ೯ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನೇಪಾಳ ಮೂಲದ ಸಂತೋಷ್ ಎಂಬವರ ಪುತ್ರಿ ನಾಪತ್ತೆಯಾಗಿರುವ ಅಪ್ರಾಪ್ತೆ ಬಾಲಕಿ.

  ನೇಪಾಳ ಮೂಲದವರಾಗಿರುವ ಈ‌ ಕುಟುಂಬವು ಮೂಡುಬಿದಿರೆ ತಾಲೂಕಿನ ಪಡುಕೊಣಾಜೆಯಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದು ಯುವತಿಯ ಹೆತ್ತವರು ಹತ್ತಿರದಲ್ಲಿರುವ ಅಡಿಕೆ ತೋಟವನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದರು.

 ಕೆಲವು ದಿನಗಳ ಹಿಂದೆ ಹತ್ತಿರದ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಕ್ಕೆ ಸಂತೋಷ್ ಅವರು ಪತ್ನಿ ಮಕ್ಕಳೊಂದಿಗೆ ತೆರಳಿದ್ದರು. ಈ ಸಂದರ್ಭ ಎರಡನೇ ಮಗಳು ಪೂಜೆಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಮನೆಯವರು ಪೂಜೆ ಮುಗಿಸಿ ಅಪರಾಹ್ನ ಮನೆಗೆ ವಾಪಾಸಾದಾಗ ಪುತ್ರಿ ಮನೆಯಲ್ಲಿರಲಿಲ್ಲ. 

  ಕೂಲಿ ಕೆಲಸಕ್ಕೆಂದು ಹೊರರಾಜ್ಯದಿಂದ ಬಂದಿದ್ದ ಯುವಕನ ಜತೆ ಈಕೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದ್ದು, ಕುಟುಂಬವು ಅಪಹರಣದ ಶಂಕೆ ವ್ಯಕ್ತಪಡಿಸಿದೆ.

 ಅಪ್ರಾಪ್ತೆ ಬಾಲಕಿಯ ನಾಪತ್ತೆ ಪ್ರಕರಣವು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Post a Comment

0 Comments