ಮಿತ್ತಬೈಲು ಶ್ರೀರಾಮ ಮಂದಿರ ಸುವರ್ಣ ಮಹೋತ್ಸವ, ನವೀಕೃತ ಸಭಾಗೃಹ ಉದ್ಘಾಟನೆ*

ಜಾಹೀರಾತು/Advertisment
ಜಾಹೀರಾತು/Advertisment

 *ಮೂಡುಬಿದಿರೆ : ದೇವರ ಪ್ರೀತಿಗಾಗಿ ಮಾಡುವ ಕೆಲಸದಲ್ಲಿ ಯಶಸ್ಸು: ವಿದ್ಯಾಧೀಶ ತೀರ್ಥರು*


*ಮಿತ್ತಬೈಲು ಶ್ರೀರಾಮ ಮಂದಿರ ಸುವರ್ಣ ಮಹೋತ್ಸವ, ನವೀಕೃತ ಸಭಾಗೃಹ ಉದ್ಘಾಟನೆ*

ದೇವರು ನಮಗೇನು ಕೊಡಬೇಕು ಎನ್ನುವ ಚಿಂತನೆಗಿಂತ ದೇವರ ಸಂತೋಷ, ಪ್ರೀತಿಯೇ ಮುಖ್ಯ ಎನ್ನುವ ಸಮರ್ಪಣಾ ಭಕ್ತಿ ಭಾವದಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸದಾ ನಮ್ಮದಾಗುತ್ತದೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್‌ ಸ್ವಾಮೀಜಿಗಳು ಹೇಳಿದ್ದಾರೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಮಿತ್ತಬೈಲು ಶ್ರೀ ರಾಮ ಮಂದಿರದಲ್ಲಿ ಭಾನುವಾರ ತಮ್ಮ ಮೊದಲ ಮೊಕ್ಕಾಂಗಾಗಿ ಪುರಪ್ರವೇಶ ಮಾಡಿದ ಬಳಿಕ ಮಂದಿರದ ಭೇಟಿ, ಪೂಜೆಯ ಬಳಿಕ ಆಶೀರ್ವಚನ ನೀಡಿದರು.


ಮಂದಿರದ ನವೀಕೃತ ಸಭಾಗೃಹವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಮಂದಿರದ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಗಿರಿಧರ ಪಿ. ನಾಯಕ್ ದಂಪತಿ ಪಾದಪೂಜೆ ನೆರವೇರಿಸಿದರು. ಆಡಳಿತ ಮಂಡಳಿ, ಮೂಡುಬಿದಿರೆ ಪೇಟೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಮತ್ತು ಇತರ ಮೊಕ್ತೇಸರರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿದರು.


ಮಂದಿರದ ನವೀಕೃತ ಸಭಾಗೃಹ ಸಹಿತ ಅಭಿವೃದ್ಧಿ ಕಾರ್ಯಗಳಲ್ಲಿ ಗಮನಾರ್ಹ ಕೊಡುಗೆ ನೀಡಿರುವ ಗೋವರ್ಧನ ನಾಯಕ್ ಮತ್ತು ಪುಲ್ಕೇರಿ ಪಾಂಡುರಂಗ ಕಾಮತ್ ದಂಪತಿಯನ್ನು ಗೌರವಿಸಿದರು.


ಮಂದಿರದ ಆಡಳಿತ ಮಂಡಳಿ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಕೋಶಾಧಿಕಾರಿ ಗೋವಿಂದ ಪ್ರಭು, ಟ್ರಸ್ಟಿಗಳಾದ ವಾಸುದೇವ ಪಿ. ನಾಯಕ್, ಶಶಿಧರ ಪಿ.ನಾಯಕ್, ನಾಗರಾಜ ಪ್ರಭು, ನರಸಿಂಹ ನಾಯಕ್, ಅನಂತ ಪ್ರಭು ನಿರ್ವಾಹಕ ವೆಂಕಟೇಶ್ ಪೈ ಮತ್ತಿತರರು ಇದ್ದರು. ಟ್ರಸ್ಟಿ ರಮೇಶ್ ನಾಯಕ್ ಸ್ವಾಗತಿಸಿದರು.


ಕುಮಟಾ ಮೊಕ್ಕಾನಿಂದ ಮಿತ್ತಬೈಲು ಪೇಟೆಗೆ ಭಾನುವಾರ ಸಂಜೆ ಆಗಮಿಸಿದ ಶ್ರೀಗಳವರನ್ನು ಪೇಟೆಗೆ ಪ್ರವೇಶಿಸುವ ಹಾದಿಯಲ್ಲಿ  ಮಂದಿರದ ಆಡಳಿತ ಮಂಡಳಿ ಮತ್ತು ಸೇರಿದ್ದ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸ್ವಾಗತಿಸಲಾಯಿತು. ಅಲಂಕೃತ ರಥದಲ್ಲಿ ಶ್ರೀಗಳ ಪುರ ಪ್ರವೇಶ ನಡೆದಿದ್ದು ಪಲ್ಲಕ್ಕಿಯಲ್ಲಿ ಸಂಸ್ಥಾನದ ಪೂಜಾ ಬಿಂಬಗಳು, ಲಾಲ್ಕಿಯಲ್ಲಿ ಗುರು ವಿದ್ಯಾಧಿರಾಜ ತೀರ್ಥರ ಭಾವ ಚಿತ್ರ, ವಾದ್ಯಮೇಳ ಸಹಿತ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.


ಬುಧವಾರ ಶತಕಲಶಾಭಿಷೇಕ, ಮಹಾಸಭೆ, ಆಶೀರ್ವಚನದ ನಂತರ  ಸಂಜೆ ಮುಂದಿನ ಮೊಕ್ಕಾಂಗೆ ಶ್ರೀಗಳು ನಿರ್ಗಮಿಸಿದರು.

Post a Comment

0 Comments