ನಾನು ಕಾಂಗ್ರೆಸ್ ಜೊತೆ ಇದ್ದೀನಿ ಎನ್ನುವ ಮಿಥುನ್ ರೈ ಹೇಳಿಕೆ ಮೂರ್ಖತನದ ಪರಮಾವಧಿ: ಶಾಸಕ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 ನಾನು ಕಾಂಗ್ರೆಸ್ ಜೊತೆ ಇದ್ದೀನಿ ಎನ್ನುವ ಮಿಥುನ್ ರೈ ಹೇಳಿಕೆ ಮೂರ್ಖತನದ ಪರಮಾವಧಿ: ಶಾಸಕ ಕೋಟ್ಯಾನ್

ಮೂಡುಬಿದಿರೆ: ಬುಧವಾರ ಬೆಳಿಗ್ಗೆ ಮೂಡುಬಿದಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕ ಮಿಥುನ್ ರೈ ಅವರು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಕಾಂಗ್ರೆಸ್ ಜೊತೆ ಇದ್ದಾರೆ ಎನ್ನುವ ಹೇಳಿಕೆ ನೀಡಿರುವುದು ಮೂರ್ಖತನದ ಪರಮಾವಧಿ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಹೇಳಿದ್ದಾರೆ.

ಅವರು ಬುಧವಾರ ಮುಲ್ಕಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಜಾತಿಯ ವಿಷ ಬೀಜ ಬಿತ್ತುತ್ತಾ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವ ಮಿಥುನ್ ರೈ ರವರ ಕುಟಿಲ ರಾಜಕಾರಣಕ್ಕೆ ಜನ ಮರುಳಾಗುವುದಿಲ್ಲ, ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನಾಗಿದ್ದು ನಮ್ಮ ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಈ ಬಾರಿ ಮುಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ 50,000ಕ್ಕೂ ಅಧಿಕ ಹೆಚ್ಚು ಮತಗಳನ್ನು ಗೆಲ್ಲಿಸಲು ಕಾರ್ಯಕರ್ತರು ಹಾಗೂ ಜನತೆ ಮುಂದಾಗಿದ್ದಾರೆ ಕೇಂದ್ರ ಸರಕಾರ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನ ಮೆಚ್ಚಿದ್ದು ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ರಂಜಿತ್ ಪೂಜಾರಿ, ಮುಖಂಡರಾದ ಭುವನಾಭಿರಾಮ ಉಡುಪ ಈ ಸಂದರ್ಭದಲ್ಲಿದ್ದರು.

Post a Comment

0 Comments