ವಿಶ್ವ ಆರೋಗ್ಯ ದಿನ * ಮೂಡುಬಿದಿರೆಯಲ್ಲಿ ಹಿರಿಯರು ಮತ್ತು ಕಿರಿಯರಿಂದ ಸೈಕಲ್ ರ್ಯಾಲಿ

ಜಾಹೀರಾತು/Advertisment
ಜಾಹೀರಾತು/Advertisment

 ವಿಶ್ವ ಆರೋಗ್ಯ ದಿನ

 * ಮೂಡುಬಿದಿರೆಯಲ್ಲಿ  ಹಿರಿಯರು ಮತ್ತು ಕಿರಿಯರಿಂದ ಸೈಕಲ್ ರ್ಯಾಲಿ

ಮೂಡುಬಿದಿರೆ: ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾನುವಾರ  ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್  ಮತ್ತು ವಿವಿಧ ಕ್ಲಬ್ ಗಳ ವತಿಯಿಂದ ಆಳ್ವಾಸ್ ಮತ್ತು ಸ್ಟಾರ್ ರೈಡರ್ಸ್ ನ  ಸಹಕಾರದೊಂದಿಗೆ "ಸೈಕ್ಲಿಂಗ್ ಫಾರ್ ಗ್ರೀನ್ ಆಂಡ್ ಹೆಲ್ತಿ ಮೂಡುಬಿದಿರೆ" ಎಂಬ ಧ್ಯೇಯ ವಾಕ್ಯದೊಂದಿಗೆ  ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಕೊಂಡಿದ್ದು ಇದರಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಸಹಿತ ಹಿರಿಯರು ಮತ್ತು ಕಿರಿಯರು ಒಟ್ಟು 54 ಮಂದಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಡಾ.ರಮೇಶ್ ಮತ್ತು ಆಲಂಗಾರು ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಹೆರಾಲ್ಡ್ ತೌವ್ರೋ ಅವರು ಹಸಿರು ನಿಶಾನೆ‌ ತೊರಿಸುವ ಮೂಲಕ ರ್ಯಾಲಿಗೆ ಚಾಲನೆಯನ್ನು ನೀಡಿದರು.

 ನಂತರ ಮಾತನಾಡಿದ ಡಾ.ರಮೇಶ್ ಅವರು ದೇವರು ನಮಗೆ ಉತ್ತಮವಾದ ಬದುಕನ್ನು  ನೀಡಿದ್ದಾರೆ. ಉತ್ತಮವಾದ ಆರೋಗ್ಯವಿದ್ದರೆ ಅದುವೇ ಆರೋಗ್ಯ ಭಾಗ್ಯ. ನಮ್ಮ ಆರೋಗ್ಯವನ್ನು ಸದೃಢಗೊಳಿಸಲು ಸೈಕ್ಲಿಂಗ್ ಮಾಡುವುದರಿಂದ ಸಾಧ್ಯವಿದೆ. ಹಣದಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬುದನ್ನು ನಾವು ಕೊರೋನಾ ಸಂದರ್ಭದಲ್ಲಿ ಅರಿತಿದ್ದೇವೆ ಎಂದ ಅವರು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸೈಕ್ಲಿಂಗ್ ಅಥವಾ ಯೋಗದಿಂದ ನಿವಾರಣೆ ಮಾಡಲು ಸಾಧ್ಯವಿದೆ ಎಂದರು.

ಹಿರಿಯರಾದ ನಿಧಿ ಅಯ್ಯಂಗಾರ್ ಅವರು ಅನುಭವವನ್ನು ಹಂಚಿಕೊಳ್ಳುತ್ತಾ ನಮ್ಮ ದೇಹ ಚಟುವಟಿಕೆಯಿಂದ ಇರಲು ಸೈಕ್ಲಿಂಗ್ ಸಹಕಾರಿಯಾಗುತ್ತದೆ. ನನ್ನಲ್ಲಿ ಈ ಹಿಂದೆ ಆರೋಗ್ಯದ ಸಮಸ್ಯೆ  ಇತ್ತು ನಾನು ಸೈಕ್ಲಿಂಗ್ ಮಾಡಲು ಆರಂಭಿಸಿದಂದಿನಿಂದ ಹಲವು ಸಮಸ್ಯೆಗಳು ನಿವಾರಣೆಯಾಗಿದೆ. ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೈಕ್ಲಿಂಗ್ ಉತ್ತಮ ವ್ಯಾಯಾಮ. ಹಿರಿಯರೂ ತಮ್ಮನ್ನು ಇದರಲ್ಲಿ ತೊಡಗಿಸಿಕೊಳ್ಳಿ ಕೀಲು ನೋವಿನ ಸಮಸ್ಯೆ, ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.  

 ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಫರಾಝ್ ಬೆದ್ರ, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಸರಿತಾ ಆಶೀರ್ವಾದ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನ ಅಧ್ಯಕ್ಷ ರೋನಿ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಜೊಸ್ಸಿ ಮಿನೇಜಸ್, ರೋಟರಿ ಮಿಡ್ ಟೌನ್ ನ ಅಧ್ಯಕ್ಷ ಮಹೇಂದ್ರ ಕುಮಾರ್, ಲಿಯೋ ಕ್ಲಬ್ ನ ಅಧ್ಯಕ್ಷ ಸ್ವಯಂ, ವಿಶ್ವ ಆರೋಗ್ಯ ದಿನ

 * ಮೂಡುಬಿದಿರೆಯಲ್ಲಿ  ಹಿರಿಯರು ಮತ್ತು ಕಿರಿಯರಿಂದ ಸೈಕಲ್ ರ್ಯಾಲಿ

ಮೂಡುಬಿದಿರೆ: ವಿಶ್ವ ಆರೋಗ್ಯ ದಿನದ ಅಂಗವಾಗಿ ಭಾನುವಾರ  ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್  ಮತ್ತು ವಿವಿಧ ಕ್ಲಬ್ ಗಳ ವತಿಯಿಂದ ಆಳ್ವಾಸ್ ಮತ್ತು ಸ್ಟಾರ್ ರೈಡರ್ಸ್ ನ  ಸಹಕಾರದೊಂದಿಗೆ "ಸೈಕ್ಲಿಂಗ್ ಫಾರ್ ಗ್ರೀನ್ ಆಂಡ್ ಹೆಲ್ತಿ ಮೂಡುಬಿದಿರೆ" ಎಂಬ ಧ್ಯೇಯ ವಾಕ್ಯದೊಂದಿಗೆ  ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಕೊಂಡಿದ್ದು ಇದರಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಸಹಿತ ಹಿರಿಯರು ಮತ್ತು ಕಿರಿಯರು ಒಟ್ಟು 54 ಮಂದಿ ಪಾಲ್ಗೊಂಡಿದ್ದರು.

ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಡಾ.ರಮೇಶ್ ಮತ್ತು ಆಲಂಗಾರು ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಹೆರಾಲ್ಡ್ ತೌವ್ರೋ ಅವರು ಹಸಿರು ನಿಶಾನೆ‌ ತೊರಿಸುವ ಮೂಲಕ ರ್ಯಾಲಿಗೆ ಚಾಲನೆಯನ್ನು ನೀಡಿದರು.

 ನಂತರ ಮಾತನಾಡಿದ ಡಾ.ರಮೇಶ್ ಅವರು ದೇವರು ನಮಗೆ ಉತ್ತಮವಾದ ಬದುಕನ್ನು  ನೀಡಿದ್ದಾರೆ. ಉತ್ತಮವಾದ ಆರೋಗ್ಯವಿದ್ದರೆ ಅದುವೇ ಆರೋಗ್ಯ ಭಾಗ್ಯ. ನಮ್ಮ ಆರೋಗ್ಯವನ್ನು ಸದೃಢಗೊಳಿಸಲು ಸೈಕ್ಲಿಂಗ್ ಮಾಡುವುದರಿಂದ ಸಾಧ್ಯವಿದೆ. ಹಣದಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯವಿಲ್ಲವೆಂಬುದನ್ನು ನಾವು ಕೊರೋನಾ ಸಂದರ್ಭದಲ್ಲಿ ಅರಿತಿದ್ದೇವೆ ಎಂದ ಅವರು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಸೈಕ್ಲಿಂಗ್ ಅಥವಾ ಯೋಗದಿಂದ ನಿವಾರಣೆ ಮಾಡಲು ಸಾಧ್ಯವಿದೆ ಎಂದರು.

ಹಿರಿಯರಾದ ನಿಧಿ ಅಯ್ಯಂಗಾರ್ ಅವರು ಅನುಭವವನ್ನು ಹಂಚಿಕೊಳ್ಳುತ್ತಾ ನಮ್ಮ ದೇಹ ಚಟುವಟಿಕೆಯಿಂದ ಇರಲು ಸೈಕ್ಲಿಂಗ್ ಸಹಕಾರಿಯಾಗುತ್ತದೆ. ನನ್ನಲ್ಲಿ ಈ ಹಿಂದೆ ಆರೋಗ್ಯದ ಸಮಸ್ಯೆ  ಇತ್ತು ನಾನು ಸೈಕ್ಲಿಂಗ್ ಮಾಡಲು ಆರಂಭಿಸಿದಂದಿನಿಂದ ಹಲವು ಸಮಸ್ಯೆಗಳು ನಿವಾರಣೆಯಾಗಿದೆ. ಮಕ್ಕಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೈಕ್ಲಿಂಗ್ ಉತ್ತಮ ವ್ಯಾಯಾಮ. ಹಿರಿಯರೂ ತಮ್ಮನ್ನು ಇದರಲ್ಲಿ ತೊಡಗಿಸಿಕೊಳ್ಳಿ ಕೀಲು ನೋವಿನ ಸಮಸ್ಯೆ, ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.  

 ರೋಟರ್ಯಾಕ್ಟ್ ಕ್ಲಬ್ ನ ಅಧ್ಯಕ್ಷ ಫರಾಝ್ ಬೆದ್ರ, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಸರಿತಾ ಆಶೀರ್ವಾದ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನ ಅಧ್ಯಕ್ಷ ರೋನಿ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಜೊಸ್ಸಿ ಮಿನೇಜಸ್, ರೋಟರಿ ಮಿಡ್ ಟೌನ್ ನ ಅಧ್ಯಕ್ಷ ಮಹೇಂದ್ರ ಕುಮಾರ್, ಲಿಯೋ ಕ್ಲಬ್ ನ ಅಧ್ಯಕ್ಷ ಸ್ವಯಂ, ವಲೇರಿಯನ್ ಸಿಕ್ವೇರಾ, ಸ್ಟಾರ್ ರೈಡರ್ಸ್ ನ ರೀವನ್ ಸಿಕ್ವೇರಾ ಉಪಸ್ಥಿತರಿದ್ದರು.

 ಸುಮಾರು 5 ಕಿ.ಮೀ ದೂರ ಕ್ರಮಿಸಿದ  ಈ ರ್ಯಾಲಿಯು ಬಡಗ ಬಸ್ತಿಯ ಎದುರು ಬಳಿಯಿಂದ ಆಲಂಗಾರು ಜಂಕ್ಷನ್ ಮುಖಾಂತರ ರಿಂಗ್ ರೋಡ್, ಸ್ವರಾಜ್ಯ ಮೈದಾನ, ನಿಶ್ಮಿತಾ ಟವರ್ಸ್ ಮುಖ್ಯರಸ್ತೆಯಿಂದ ಹಾದು ಜೈನ್ ಹೈಸ್ಕೂಲ್ ಮುಖಾಂತರ ಸಾಗಿ ಬಂದು ಫಾರ್ಚುನ್ ಹೈವೆ ಕಟ್ಟಡದ ಹತ್ತಿರ ಅಂತ್ಯಗೊಂಡಿತು.

  ಲಕ್ಕಿ ಡ್ರಾ ಮೂಲಕ ಗೆದ್ದ ಒಂದು ಸೈಕಲನ್ನು ವಿತರಿಸಲಾಯಿತು. ರ್ಯಾಲಿಯಲ್ಲಿ ಭಾಗವಹಿಸಿದ್ದ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರವನ್ನು ನೀಡಲಾಯಿತು.

_-------------

ಸೈಕ್ಲಿಂಗ್ ನಲ್ಲಿ ಗಮನ ಸೆಳೆದ ಮಾಜಿ ಸಚಿವ ಅಭಯಚಂದ್ರ ಜೈನ್

75 ರ ಹರೆಯದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು   ಸೈಕ್ಲಿಂಗ್ ನಲ್ಲಿ ಭಾಗವಹಿಸಿ 5  ಕಿ.ಮೀನ್ನು ಪೂರ್ಣಗಳಿಸುವ ಮೂಲಕ ಮಾದರಿಯಾಗಿ ಗಮನ ಸೆಳೆದರು.

     ವಿಶ್ವ ಆರೋಗ್ಯ ದಿನದ ಅಂಗವಾಗಿ ಹಿರಿಯ ನಾಗರಿಕನಾಗಿ ಈ ಸೈಕ್ಲಿಂಗ್ ನಲ್ಲಿ ಪ್ರೀತಿಯಿಂದ  ಭಾಗವಹಿಸಿದ್ದೇನೆ. ಉತ್ತಮ ಆರೋಗ್ಯಕ್ಕಾಗಿ ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮ. ಸೈಕ್ಲಿಂಗ್ ಮಾಡುವುದರಿಂದ ಮನಸ್ಸು ಮತ್ತು ದೇಹ ಸದಾ ಉಲ್ಲಾಸದಿಂದ ಇರುತ್ತದೆ. ತಾನು ಪ್ರತಿದಿನ  ಸೈಕ್ಲಿಂಗ್ ಮಾಡುತ್ತಿರುವುದರಿಂದ ಆರೋಗ್ಯ ಸದೃಢವಾಗಿದೆ ಎಂದರು.

_--------------

Post a Comment

0 Comments