ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆಗೆ ಸಂಸದರ ವೈಫಲ್ಯವೇ ಕಾರಣ: ಅಭಯಚಂದ್ರ ಜೈನ್ ಆರೋಪ

ಜಾಹೀರಾತು/Advertisment
ಜಾಹೀರಾತು/Advertisment

 ಜಿಲ್ಲೆಯಲ್ಲಿ ಸೌಲಭ್ಯಗಳ ಕೊರತೆಗೆ ಸಂಸದರ ವೈಫಲ್ಯವೇ ಕಾರಣ: ಅಭಯಚಂದ್ರ ಜೈನ್ ಆರೋಪ


ಮೂಡುಬಿದಿರೆ: ಮಂಗಳೂರು ಮೂಡುಬಿದಿರೆ ಮೂಲಕ ಹಾದು ಹೋಗುವ ರಾ.ಹೆ.ಚತುಷ್ಪಥ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದು, ಬೆಳುವಾಯಿ ಪೇಟೆಯಲ್ಲಿ ಜನತೆಗೆ ಸಮಸ್ಯೆ, ಮೂಡುಬಿದಿರೆ ಸುರತ್ಕಲ್ ಮಾರುಕಟ್ಟೆ ಕಾಮಗಾರಿ ವಿಳಂಬ ಹೀಗೆ ತನ್ನ ವ್ಯಾಪ್ತಿಯ ಜನೋಪಯೋಗಿ ಕಾರ್ಯಗಳ ವೈಫಲ್ಯ,ವಿಳಂಬಕ್ಕೆ ದ.ಕ ಸಂಸದರೇ ನೇರ ಹೊಣೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.

 ಅವರು ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಂಟ್ವಾಳದ ಹೈವೇ ಕಾಮಗಾರಿ ಬಳಿಕ ಆರಂಭವಾದರೂ ಪೂರ್ಣವಾಗಿದೆ. ನಮ್ಮ ಮಂಗಳೂರು ಮೂಡುಬಿದಿರೆ ಹೈವೇ ಗೊಂದಲಗಳ ಗೂಡಾಗಿ, ವಾರೆ ಕೋರೆ ತಿರುವಿಗೂ ಆಸ್ಪದ ನೀಡಿ ಇನ್ನೂ ಪರಿಪೂರ್ಣವಾಗದೇ ಕುಂಟುತ್ತಿದೆ.

ಬಿ.ಸಿ.ರೋಡ್ ನಲ್ಲಿ ಒಂದು ಕಿ.ಮೀ ಫ್ಲೈ ಓವರ್ ಇದ್ದರೂ ಅಂಡರ್ ಪಾಸ್ ಜನತೆಗೆ ವರದಾನವಾಗಿದೆ. ಆದರೆ ಜನತೆ ಪ್ರತಿಭಟಿಸಿದರೂ ಸುಳ್ಳು ಭರವಸೆ ನೀಡಿ ತಡೆಗೋಡೆಯಂತೆ ಬೆಳುವಾಯಿಯಲ್ಲಿ ಫ್ಲೈ ಓವರ್ ನಿರ್ಮಾಣವಾಗುತ್ತಿರುವುದು ಸಂಸದ ವೈಫಲ್ಯವನ್ನು ಎತ್ತಿ ತೋರಿಸಿದೆ ಈ ಬಗ್ಗೆ ಜನತೆ ತಮಗಾಗಿರುವ ಅನ್ಯಾಯ ಮತ್ತು ನೋವಿಗೆ ಈ ಬಾರಿ ಚುನಾವಣೆಯಲ್ಲಿ ಸೂಕ್ತವಾಗಿ ಉತ್ತರಿಸಲಿದ್ಧಾರೆ ಎಂದರು.


ಮೂಡುಬಿದಿರೆ ಮಾರ್ಕೆಟ್ ಗೊಂದಲ ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯದ ಲ್ಲಿದೆ . ಕೇಂದ್ರ ಸರಕಾರದ ಅಧೀನದಲ್ಲಿರುವ ಪುರಾತತ್ವ ಇಲಾಖೆಯೊಡನೆ ಜನತೆಯ ಸಂಕಷ್ಟವನ್ನು ವಿವರಿಸಿ ಪರಿಹಾರ ಕಂಡು ಕೊಳ್ಳಲು ಸಂಸದರು ಮನಸ್ಸು ಮಾಡಿಲ್ಲ. ಸುರತ್ಕಲ್ ಮಾರ್ಕೆಟ್ ಕೂಡಾ ಅರ್ಧಕ್ಕೆ ನಿಂತಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಹಳೆಯಂಗಡಿ, ಜೋ ಕಟ್ಟೆ ಸಹಿತ ಹಲವೆಡೆ ರೈಲ್ವೇ ಕ್ರಾಸಿಂಗ್ ಪ್ಲೈ ಓವರ್ ಮಾಡಬೇಕಾದ್ದನ್ನೂ ಸಂಸದರು ಮರೆತಿದ್ದಾರೆ. ಮೂಡುಬಿದಿರೆಯಲ್ಲಿ ಬೀಡಿ ಕಾರ್ಮಿಕರ ಆಸ್ಪತ್ರೆಯ ಸ್ಥಿತಿಯನ್ನೂ ಸುಧಾರಿಸಬೇಕಿದೆ ಎಂದರು.

ನುಡಿದಂತೆ ನಡೆದ ಸಿದ್ಧರಾಮಯ್ಯ ಅವರ ಗ್ಯಾರಂಟಿ ಸರಕಾರ ಬಡವರಿಗೆ ನೆರವಾದರೆ ಹೊಟ್ಟೆಕಿಚ್ಚು ಪಡುವ ಅಗತ್ಯವಿಲ್ಲ. ನರೇಗಾದಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದ್ದು ದ. ಕ ಉಡುಪಿ, ಶಿವಮೊಗ್ಗ ಸಹಿತ ಹೆಚ್ಚಿನ ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದವರು ಹೇಳಿದರು.


ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಘು ಪೂಜಾರಿ ಉಪಸ್ಥಿತರಿದ್ದರು.

Post a Comment

0 Comments