ಬಿಜೆಪಿ ಅಭ್ಯರ್ಥಿ ಕೋಟಗೆ ಮಾಜಿ ಯೋಧರ ಬಲ-ದೇಣಿಗೆ ನೀಡಿದ ಮತ್ತೊಬ್ಬ ನಿವೃತ್ತ ಯೋಧ

ಜಾಹೀರಾತು/Advertisment
ಜಾಹೀರಾತು/Advertisment

 ಬಿಜೆಪಿ ಅಭ್ಯರ್ಥಿ ಕೋಟಗೆ ಮಾಜಿ ಯೋಧರ ಬಲ-ದೇಣಿಗೆ ನೀಡಿದ ಮತ್ತೊಬ್ಬ ನಿವೃತ್ತ ಯೋಧ

ಲೋಕಸಭಾ ಚುನಾವಣೆ ಕಣ ಎಲ್ಲೆಡೆ ರಂಗೇರುತ್ತಿದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಪ್ರಚಾರದ ಅಬ್ಬರವನ್ನು ಪಡೆಯುತ್ತಿದೆ. ಈ ಮಧ್ಯೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹೋದಲ್ಲೆಲ್ಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.


 ಇಂದು ನಿವೃತ್ತ ಯೋಧ ಪ್ರಕಾಶ್ ಎಂಬವರು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತನ್ನ ಒಂದು ತಿಂಗಳ ಪಿಂಚಣಿಯ ಹಣವನ್ನು ನೀಡಿ ಅವರ ಗೆಲುವಿಗೆ ಶುಭ ಹಾರೈಸಿದ್ದಾರೆ. ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಅವರು "ದೇಶದ ಸೈನಿಕರಾಗಿ ಕೆಲಸ ಮಾಡಿದ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಸೈನಿಕರಿಗೆ ಮೋದಿಯವರು ನೀಡಿದ ಶಕ್ತಿ ದೇಶವನ್ನು ಬಲಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ಕಾಲದಲ್ಲಿ ಕೊಳೆತ ಮೊಟ್ಟೆಗಳಿಂದ ಉಗ್ರರು ಸೈನಿಕರ ಸೈನಿಕರಿಗೆ ಹೊಡೆಯುತ್ತಿದ್ದರು. ಇಂದು ಒಂದು ಕಲ್ಲು ಸೈನಿಕರ ಮೇಲೆ ಬಿದ್ದರೆ ನೂರು ಗುಂಡುಗಳನ್ನು ಹೊಡೆಯುವ ಅಧಿಕಾರವನ್ನು ಮೋದಿಯವರು ಸೈನಿಕರಿಗೆ ನೀಡಿದ್ದಾರೆ ಹೀಗಾಗಿ ದೇಶ ಇಷ್ಟೊಂದು ಭದ್ರತಾ ವ್ಯವಸ್ಥೆಯಲ್ಲಿ ಬಲಿಷ್ಠವಾಗಿದೆ. ಈ ಕಾರಣಕ್ಕಾಗಿ ಮತ್ತೊಮ್ಮೆ ಮೋದಿ ಅವರು ಆಯ್ಕೆಯಾಗಬೇಕು. ಹಾಗಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಾಮಾನ್ಯ ವ್ಯಕ್ತಿ ಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಗೆಲ್ಲಬೇಕು" ಎಂದು ಹೇಳಿದರು.


ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾಜಿ ಸೈನಿಕರ ಬೆಂಬಲ ಸಿಕ್ಕಿರುವುದು ಇದೇ ಮೊದಲಲ್ಲ ಇತ್ತೀಚೆಗೆ ನಡೆದ ತರೀಕೆರೆ ಸಮಾವೇಶದಲ್ಲಿ ನಿವೃತ್ತ ಯೋಧರ ರವರು ವೇದಿಕೆಗೆ ಆಗಮಿಸಿ ತನ್ನ ಒಂದು ತಿಂಗಳ ಪಿಂಚಣಿಯನ್ನು ನೀಡಿದ್ದರು. ಮತ್ತು ಮಾಜಿ ಸೈನಿಕರ ಬಳಗವು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಕ್ತ ಬೆಂಬಲವನ್ನು ನೀಡಿತ್ತು. ಹೀಗಾಗಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾಜಿ ಸೈನಿಕರ ಬಲ ದೊರೆತಿದ್ದು ಮತ್ತಷ್ಟು ಶಕ್ತಿ ತಂದಿದೆ ಎನ್ನಬಹುದು.

Post a Comment

0 Comments