ವಾಲ್ಪಾಡಿಯಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ

ಜಾಹೀರಾತು/Advertisment
ಜಾಹೀರಾತು/Advertisment

 ವಾಲ್ಪಾಡಿಯಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ

ಮೂಡುಬಿದಿರೆ: ಭಾರತ ಚುನಾವಣಾ ಆಯೋಗ,‌ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಹಾಗೂ ಮೂಡುಬಿದಿರೆ ತಾಲೂಕು ಪಂಚಾಯತ್ ವತಿಯಿಂದ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳಿಯೂರು ಸುಮಂಗಲಿ ಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ದುಡಿಯುತ್ತಿರುವ  ಕೂಲಿಕಾರ್ಮಿಕರಿಗೆ ಗುರುವಾರ ಸಂಜೆ ಮತದಾನ ಜಾಗೃತಿ ಮೂಡಿಸಲಾಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.‌ವೆಂಕಟಾಚಲಪತಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮತದಾನ‌ದ ಮಹತ್ವವನ್ನು ತಿಳಿಸಿ ಮಾತನಾಡಿ  ಮಹಿಳಾ ಕಾರ್ಮಿಕರಿಗೆ ಗುಲಾಬಿ ಹೂ ಹಾಗೂ ಕರಪತ್ರವನ್ನು ನೀಡಿ ಮತದಾನ ಮಾಡುವಂತೆ ತಿಳಿಸಲಾಯಿತು. 

ಈ ಸಂದರ್ಭದಲ್ಲಿ ಸುಮಂಗಲಿ ಕ್ಯಾಶ್ಯು ಇಂಡಸ್ಟ್ರೀಸ್ ನ ಮುಖ್ಯಸ್ಥೆ ಜಾನೇಟ್ ರೂಪೇಶ್ ಪಿಂಟೋ,

 ವಾಲ್ಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪ್ರಿಯಾ, ಮಂಜುಶ್ರೀ, ಸಂದೀಪ್, ಐಇಸಿ ಸಂಯೋಜಕರಾದ ಅನ್ವಯ, ತಾ.ಪಂ ಸಿಬ್ಬಂದಿಗಳಾದ ಮುಖೇಶ್, ಮಾದವ್ ಉಪಸ್ಥಿತರಿದ್ದರು.

ತಾ.ಪಂ. ಸಹಾಯಕ‌ ನಿರ್ದೇಶಕರಾದ ಸಾಯೀಶ ಚೌಟ ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments