ಎ. 14 : ನೆಲ್ಲಿಕಾರು ಬಸದಿ ಮಹಾರಥಯಾತ್ರಾ ಮಹೋತ್ಸವ
ಕಾರ್ಕಳ : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿ ಭಗವಾನ್ ಅನಂತಸ್ವಾಮಿ ಮತ್ತು ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವ ಎ. 14 ರಂದು ನಡೆಯಲಿದೆ.
ಎ. 9 ರಿಂದ 15 ರವರೆಗೆ ನಡೆಯುವ ಉತ್ಸವದಲ್ಲಿ ಈಗಾಗಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದು, ಎ. 14 ರಂದು ರಥೋತ್ಸವದ ಅಂಗವಾಗಿ ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮ ದೇವರಿಗೆ ಪಂಚಾಮೃತ ಅಭಿಷೇಕ, ಶ್ರೀ
ಬಲಿ ವಿಧಾನ, ರಥ ಸಂಪ್ರೋಕ್ಷಣ, ಲಕ್ಷ ಹೂವಿನ ಪೂಜೆ, ರಥೋಹಣಕ್ಕೆ ಪ್ರಸಾದ ಬೇಡಿಕೆ, ಮಹಾ ನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹಯಕ್ಷನ ಶ್ರೀ ವಿಹಾರ, ಗ್ರಾಮ ಬಲಿ, ಮಧ್ಯಾಹ್ನ 12.35ಕ್ಕೆ ಶ್ರೀ ಬ್ರಹ್ಮಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ. ನಂತರ ಸಂಘಸಂತರ್ಪಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 7 ಗಂಟೆಗೆ ಸಮವಸರಣ ಪೂಜೆ, ರಾತ್ರಿ 10 ಗಂಟೆಗೆ ರಥೋತ್ಸವ ನಡೆಯಲಿದ್ದು, ನಂತರ ಶ್ರೀ ಅನಂತನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ ಮತ್ತು ಉತ್ಸವ ನಡೆಯಲಿದೆ.
0 Comments