ಮೂಡುಬಿದಿರೆ : ಜೈನ ಪ.ಪೂ. ಕಾಲೇಜಿಗೆ ಶೇ 97.55 ಫಲಿತಾಂಶ
ಮೂಡುಬಿದಿರೆ: ಸ್ಥಳೀಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ
ಇಲ್ಲಿನ ಜೈನ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 97.55 ಫಲಿತಾಂಶ ದಾಖಲಿಸಿದೆ.
409 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 399 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 97.55 ಪಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ಕುಮಾರಿ ದೀಪ್ತಿ 587 (97.83% )ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ 11ನೇ ಸ್ಥಾನವನ್ನು ಪಡೆದಿರುತ್ತಾಳೆ . ವಿಜ್ಞಾನ ವಿಭಾಗದಲ್ಲಿ ಶೆಟ್ಟಿ ಪೂರ್ಣ ಚಂದ್ರ 585 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ 14ನೆಯ ಸ್ಥಾನವನ್ನು ಪಡೆದಿರುತ್ತಾನೆ.
ವಾಣಿಜ್ಯ ವಿಭಾಗದ ಪುನೀತ್ ರಾಜ್ ಮತ್ತು ವ್ಯಾಲೆಂಟೈನ್ ಯಶಸ್ ರೊಡ್ರಿಗಸ್ 583 ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನಿಗಳಾಗಿದ್ದಾರೆ
184 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ : 399 ವಿದ್ಯಾರ್ಥಿಗಳಲ್ಲಿ 184 ಡಿಸ್ಟಿಂಕ್ಷನ್ 193 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳ ಬಗ್ಗೆ ಆಡಳಿತ ಮಂಡಳಿ ದಿಗಂಬರ ಜೈನ ವಿದ್ಯಾವರ್ಧಕ ಸಂಘವು ಹರ್ಷ ವ್ಯಕ್ತಪಡಿಸಿದೆ.
0 Comments