ರಾಜ್ಯ ಮಟ್ಟದಲ್ಲಿ 2ನೇ, 4ನೇ ರ‍್ಯಾಂಕ್ ಗಳಿಸಿದ ಮೂಡುಬಿದಿರೆಯ ಎಕ್ಸಲೆಂಟ್

ಜಾಹೀರಾತು/Advertisment
ಜಾಹೀರಾತು/Advertisment

 ರಾಜ್ಯ ಮಟ್ಟದಲ್ಲಿ 2ನೇ, 4ನೇ ರ‍್ಯಾಂಕ್ ಗಳಿಸಿದ ಮೂಡುಬಿದಿರೆಯ ಎಕ್ಸಲೆಂಟ್ 

ಮೂಡುಬಿದಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ  ವಿದ್ಯಾರ್ಥಿಗಳು 2ನೇ, 4ನೇ ರ‍್ಯಾಂಕ್ ಪಡೆಯುವ ಮೂಲಕ  ರಾಜ್ಯಮಟ್ಟದ ಟಾಪ್ 10ರಲ್ಲಿ 15 ರ‍್ಯಾಂಕ್ ಗಳಿಸಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸುದ್ದೀಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. 


ಗುಣಸಾಗರ ಡಿ. 597 ಅ0ಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಹಾಗೂ ಭಾರ್ಗವಿ ಎ0.ಜೆ 595 ಅ0ಕಗಳನ್ನು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದದಲ್ಲಿ ಸ್ಪೂರ್ತಿ ಸಿ.ಪಾಟೀಲ್ 593 ಅಂಕ ಗಳಿಸಿ 5ನೇ ಸ್ಥಾನವನ್ನು ಪಡೆದಿದ್ದಾರೆ. 


ವಿಜ್ಞಾನ ವಿಭಾಗದಲ್ಲಿ ಧ್ರುವ ಜಿ.ಹೆಗ್ಡೆ(591), ಪ್ರಾಪ್ರಿ ಬೆಳಕೇರಿ (591) ಸುಹಾಸ್ ಎ0.ಎಸ್(590), ಸ್ಪೂರ್ತಿ ಎ0.ಜಿ (590), ರಿಷಬ್ ರಾಜೇಶ್ ನಾಯಕ್ (590) ರಾಜ್ಯದ ಮೊದಲ ಹತ್ತು ರ‍್ಯಾಂಕ್ ಗಳಲ್ಲಿ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಖುಷಿ.ಕೆ (591), ರೋಚನಾ ಮಲ್ಯ(590), ಎ.ಪಿ ರಕ್ಷಾ(589), ಶರದ್ ಎ0.ಭಟ್ (589), ಸಾನಿಕಾ ಜೈನ್ (589), ಮೋಕ್ಷಾ ಜೈನ್ (588), ಸಂಸ್ಕೃತಿ ಪೂಜಾರಿ (588) ಉತ್ತಮ ಅ0ಕವನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ್ದಾರೆ.


ಪರೀಕ್ಷೆಗೆ ಹಾಜರಾದ 852 ವಿದ್ಯಾರ್ಥಿಗಳಲ್ಲಿ 851 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 649 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 201 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾ0ಶ ದಾಖಲಾಗಿದ್ದು ಸ0ಸ್ಥೆಯ ಒಟ್ಟು ಫಲಿತಾ0ಶ ಶೇ.99.90 ಆಗಿದೆ ಎಂದು ಯುವರಾಜ್ ಜೈನ್ ತಿಳಿಸಿದರು. 

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು. 

---

ಎಕ್ಸಲೆ0ಟ್ ವಿದ್ಯಾ ಸ0ಸ್ಥೆ ಕಳೆದ 11 ವರ್ಷಗಳಿ0ದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸ0ಸ್ಕಾರ ಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊ0ಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರ0ತರವಾಗಿ ಅತ್ಯುತ್ತಮ ಫಲಿತಾ0ಶವನ್ನು ದಾಖಲಿಸುತ್ತಾ ಬ0ದಿದೆ.

-ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಮೂಡುಬಿದಿರೆ

---

ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮುಂದುವರಿಸುವಾಸೆ: ಗುಣಸಾಗರ ಡಿ. 

ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವ ಮೂಡುಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ ಗುಣಸಾಗರ ಡಿ. ಅವರು ಅರ್ಟಿಫಿಶಿಯಲ್ ಇಂಟೆಲಿಜೆನ್ಸಿ ಸಾಪ್ಟವೇರ್ ಕ್ಷೇತ್ರದಲ್ಲಿ ಅಧ್ಯಯನ ಮಾಡಿ, ಉದ್ಯೋಗ ಆಕಾಂಕ್ಷೆ ಪಡೆದಿರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. 

್ಲ ತುಮಕೂರು ಜಿಲ್ಲೆಯ ತಿಪಟೂರಿನ ಪತ್ರಕರ್ತ ದಯನ0ದ ಟಿ.ಎಸ್ ಮತ್ತು ಗೃಹಿಣಿ ಸವಿತಾ ಅವರ ಪುತ್ರನಾಗಿರುವ ಈತ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.91, ಪ್ರಥಮ ಪಿಯುಸಿಯಲ್ಲಿ ಶೇ.97 ಪಡೆದಿದ್ದು, ದ್ವಿತೀಯ ಪಿಯುಸಿಯಲ್ಲಿ 597 ಅಂಕಗಳೊAದಿಗೆ ಸಾಧನೆ ಮಾಡಿದ್ದಾರೆ. ತರಗತಿಯ ಕಲಿಕೆಯನ್ನು ಹೊರತುಪಡಿಸಿ 8 ಗಂಟೆಗಳ ಕಾಲ ವ್ಯಾಸಂಗ ಮಾಡಿದ್ದೇನೆ. ಎಕ್ಸಲೆಂಟ್ ಸಂಸ್ಥೆಯಲ್ಲಿನ ಕಲಿಕೆಗೆ ಪೂರಕವಾದ ವಾತಾವರಣ, ಸ್ಟಡಿ ಮೆಟಿರೀಯಲ್‌ಗಳು ಉತ್ತಮವಾಗಿದ್ದು, ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. 

---

ರೆಡಿಯಾಲಾಜಿಸ್ಟ್ ಆಗುವಾಸೆ: ಭಾರ್ಗವಿ ಎ0.ಜೆ 

ಚಿತ್ರದುರ್ಗದ ರೇಲ್ವೇ ಇಲಾಖೆಯ ಉದ್ಯೋಗಿ ಜಯಾನ0ದ ಮೂರ್ತಿ ಮತ್ತು ಪ್ರೌಢಶಾಲೆಯ ಶಿಕ್ಷಕಿ ಚ0ದ್ರಕಲಾ ದಂಪತಿಯ ಪುತ್ರಿ ಭಾರ್ಗವಿ ಎ0.ಜೆ ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 595 ಅ0ಕಗಳನ್ನು ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

695 ಅಂಕಗಳನ್ನು ಗಳಿಸು ನಿರೀಕ್ಷೆ ಇತ್ತು. ತರಗತಿಯ ಪಾಠಗಳನ್ನು ಸರಿಯಾಗಿ ಕೇಳಿ, ಹಾಸ್ಟೆಲ್‌ನ ಗಳಿಕೆಯ ಅವಧಿಯನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡಿರುವುದರಿAದ ಉತ್ತಮ ಅಂಕ ಗಳಿಸುವಂತಾಗಿದೆ. ಎಕ್ಸಲೆಂಟ್ ಸಂಸ್ಥೆಯ ಶೈಕ್ಷಣಿಕ ವಾತಾವರಣ, ಉತ್ತಮ ಶಿಕ್ಷಕರ ಸಹಕಾರ ಅಂಕಗಳನ್ನು ಗಳಿಸಲು ಅವಕಾಶ ಕಲ್ಪಿಸಿದೆ. ರೆಡಿಯಾಲಾಜಿಸ್ಟ್ ಆಗುವಾಸೆಯಿದೆ. ನೀಟ್‌ನಲ್ಲಿ ಉತ್ತಮ ಅಂಕ ಗಳಿಸುವ ನಿರೀಕ್ಷೆ ಇದೆ. 

--

Post a Comment

0 Comments