ಯೆನೆಪೋಯ ಇನ್ಸ್ಟಿಟ್ಯೂಟ್ ನಲ್ಲಿ 3 ನೇ ಅಂತರಾಷ್ಟ್ರೀಯ ಸಮ್ಮೇಳನ "ಐಸಿ ಫೆಸ್ಟ್-2024"

ಜಾಹೀರಾತು/Advertisment
ಜಾಹೀರಾತು/Advertisment

 ಯೆನೆಪೋಯ ಇನ್ಸ್ಟಿಟ್ಯೂಟ್ ನಲ್ಲಿ 3 ನೇ ಅಂತರಾಷ್ಟ್ರೀಯ ಸಮ್ಮೇಳನ "ಐಸಿ ಫೆಸ್ಟ್-2024"

ಮೂಡುಬಿದಿರೆ: ತೋಡಾರಿನಲ್ಲಿರುವ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಫ್ರಾಂಟಿಯರ್ಸ್ ಕುರಿತಾದ  3 ನೇಯ ಅಂತರಾಷ್ಟ್ರೀಯ ಸಮ್ಮೇಳನ

"ಐಸಿ ಫೆಸ್ಟ್-2024 

 ನಡೆಯಿತು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಹೆಚ್ಒಡಿ  ಡಾ.ಮಂಜುನಾಥ ಕೊಟ್ಟಾರಿ ದೀಪ ಬೆಳಗಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. 

 ನಂತರ ಮಾತನಾಡಿದ ಅವರು ಸಂಶೋಧನಾ ಪ್ರಬಂಧದ ಗುಣಮಟ್ಟ, ಕೃತಿಚೌರ್ಯ ಮತ್ತು ಇದರಿಂದ ವಿದ್ಯಾರ್ಥಿಗಳಿಗಾಗುವ  ಪ್ರಯೋಜನಗಳ ಬಗ್ಗೆ ಮಾಹಿತಿ ಮತ್ತು ಶೈಕ್ಷಣಿಕ ಉತ್ಕೃಷ್ಟತೆಗೆ ಸಮ್ಮೇಳನದ ಬದ್ಧತೆಯ ಕುರಿತು  ಮಾತನಾಡಿದರು.

ಕ್ಯಾಂಪಸ್ ಆಡಳಿತಾಧಿಕಾರಿ  ಮಹಮ್ಮದ್ ಶಾಹಿದ್ ಉಪಸ್ಥಿತರಿದ್ದರು.

ವೈಐಟಿಯ ಪ್ರಾಂಶುಪಾಲ ಡಾ.ಆರ್.ಜಿ.ಡಿಸೋಜಾ  ಸ್ವಾಗತಿಸಿದರು.

ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ಅಪ್ಲೈಡ್ ಸೈನ್ಸ್ ಮಸ್ಕತ್ ಇದರ

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ

 ಸುಲ್ತಾನೇಟ್ ಆಫ್ ಓಮನ್ ನ ಉಪ ಕಾರ್ಯಕ್ರಮ ನಿರ್ದೇಶಕ  ಡಾ.ಗುಣಶೇಖರನ್ ತಂಗವೇಲ ಉಪಸ್ಥಿತರಿದ್ದರು.


 ಇಸಿಇ ವಿಭಾಗದ ಒ.ಡಿ.ಡಾ. ಪ್ರಸನ್ನ ಕುಮಾರ್ ಸಿ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐಕ್ಯೂಎಸಿ ಸಂಯೋಜಕಿ ಪ್ರೊ. ವಾಣಿ ವಂದಿಸಿದರು.

Post a Comment

0 Comments