ಉಡುಪಿಗೆ ಉದಯ್ ಕುಮಾರ್ ಶೆಟ್ಟಿ: ಪ್ರಚಾರ ಆರಂಭಿಸಿದ ಬಿಜೆಪಿ ಕಾರ್ಯಕರ್ತರು

ಜಾಹೀರಾತು/Advertisment
ಜಾಹೀರಾತು/Advertisment

 ಉಡುಪಿಗೆ ಉದಯ್ ಕುಮಾರ್ ಶೆಟ್ಟಿ: ಪ್ರಚಾರ ಆರಂಭಿಸಿದ ಬಿಜೆಪಿ ಕಾರ್ಯಕರ್ತರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬದಲಾಯಿಸಬೇಕೆಂಬ ಕೂಗು ಎದ್ದಿದ್ದು ಈ ಬಾರಿಯಾದರೂ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.


ಬಹುತೇಕ ಟಿಕೆಟ್ ಬದಲಾವಣೆ ಆಗುವ ಸಂಭವವಿದ್ದು ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿಯವರ ಹೆಸರು ಕೇಳಿ ಬರುತ್ತಿದೆ. ಉದಯ ಕುಮಾರ್ ಶೆಟ್ಟಿ ಹೆಸರು ಬಂದಿದ್ದು ಇದೇ ಮೊದಲಲ್ಲ. ಪ್ರತೀ ಲೋಕಸಭಾ ಅಥವಾ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅವರ ಹೆಸರು ಮುನ್ನಲೆಗೆ ಬರುತ್ತಿತ್ತು. ಆದರೆ ಈ ಬಾರಿ ಸ್ವತಃ ಕಾರ್ಯಕರ್ತರೇ ಅವರ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. 


 ಉಡುಪಿ ಜಿಲ್ಲೆಯ ಕಾರ್ಯಕರ್ತರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಉದಯ್ ಕುಮಾರ್ ಶೆಟ್ಟಿಯವರ ಪರವಾಗಿ ಕೆಲಸ ಆರಂಭಿಸಿದ್ದು ಸಂಘ ಹಾಗೂ ಪಕ್ಷದ ಹಿರಿಯ ನಾಯಕರ ಬಳಿ ತಮ್ಮ ಅಪೇಕ್ಷೆಯನ್ನು ಮಂಡಿಸಿ ಕಾರ್ಯಕರ್ತರೇ ಟಿಕೆಟ್ ಕೇಳಿದ್ದು ಪಕ್ಷದ ವರಿಷ್ಠರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ.

Post a Comment

0 Comments