ಕೋಟ ಮೇಲೆ ಮೋದಿ ಪ್ರೀತಿ: ಬೆನ್ನು ತಟ್ಟಿ, ಕೈ ಕುಲುಕಿ ಗೆದ್ದೇ ಗೆಲ್ತೀರಿ ಎಂದ್ರಂತೆ ನಮೋ
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಗೆ ಬಂದು ಕುಳಿತುಕೊಳ್ಳುತ್ತಲೇ ಪಕ್ಕದಲ್ಲಿದ್ದ ಕೋಟ ಶ್ರೀನಿವಾಸ ಪೂಜಾರಿಯವರನ್ನು ನೋಡಿ ಅವರ ಕೈ ಹಿಡಿದು ಪ್ರೀತಿಯಿಂದ ಮಾತನಾಡಿದರು.
ನಂತರ ವೇದಿಕೆಯಿಂದ ತೆರಳುವ ಸಂದರ್ಭದಲ್ಲೂ ಕೋಟ ಶ್ರೀನಿವಾಸ ಪೂಜಾರಿಯವರ ಬೆನ್ನು ತಟ್ಟಿ ಶುಭ ಹಾರೈಸಿದರು. ಈ ಬಗ್ಗೆ ಸಂತಸ ಹಂಚಿಕೊಂಡ ಕೋಟ ಗೆದ್ದೇ ಗೆಲ್ತೀಯಾ ಎಂದು ಶುಭ ಹಾರೈಸಿದರು ಎಂದು ಹೇಳಿದರು.
0 Comments