ಬಿಜೆಪಿ ಅಭ್ಯರ್ಥಿ ಕೋಟಾಗೆ ಅಯೋಧ್ಯೆಯ ಪದಕ ನೀಡಿ ಶುಭ ಹಾರೈಸಿದ ಮಾಜಿ ಶಾಸಕ ರಘುಪತಿ ಭಟ್
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ರಘುಪತಿ ಭಟ್ ರವರ ಮನೆಗೆ ತೆರಳಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಪೂಜಾರಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದ ರಘುಪತಿ ಭಟ್ ರವರು ಶಾಲು ಹೊದಿಸಿ ಅಭಿನಂದಿಸಿ ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಪ್ರಸಾದದ ರೂಪದಲ್ಲಿ ತಂದಿರುವ ಬೆಳ್ಳಿಯ ನಾಣ್ಯವನ್ನು ನೀಡಿ ಶುಭ ಹಾರೈಸಿದರು.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಮಂಡಲೋತ್ಸವದಲ್ಲಿ ರಘುಪತಿ ಭಟ್ ರವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.
0 Comments