ಕಲ್ಲಬೆಟ್ಟು ನಲ್ಲಿ ಮಹಿಳಾ ಆರೋಗ್ಯ ಮಾಹಿತಿ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಕಲ್ಲಬೆಟ್ಟು ನಲ್ಲಿ ಮಹಿಳಾ ಆರೋಗ್ಯ ಮಾಹಿತಿ ಶಿಬಿರ


ಮೂಡುಬಿದಿರೆ: ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಇದರ ಆಶ್ರಯದಲ್ಲಿ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘ, ವಂದೇ ಮಾತರಂ ಸೌಹಾರ್ದ ಸಹಕಾರಿ ಸಂಘ, ಮೂಡುಬಿದಿರೆ ಪ್ರೇರಣಾ ಟ್ರಸ್ಟ್ ಹಾಗೂ  ಆಳ್ವಾಸ್ ಹೆಲ್ತ್ ಸೆಂಟರ್ ನ ಸಹಯೋಗದೊಂದಿಗೆ ಕಲ್ಲಬೆಟ್ಟು ಸೊಸೈಟಿಯ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ ಜರಗಿತು.

ಕಲ್ಲಬೆಟ್ಟು ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಪುರಸಭಾ ಸದಸ್ಯ  ಸುರೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ಫಾಸ್ಟ್ ಪುಡ್ ನ ಕಾಲದಲ್ಲಿ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದು ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಇಂದು ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಕುಟುಂಬದ ಮತ್ತು ಸಮಾಜದ ಆರೋಗ್ಯ ಸಂರಕ್ಷಣೆಗಾಗಿ ಇಂತಹ ಶಿಬಿರಗಳ ಅಗತ್ಯವಿದ್ದು ಅದರ ಸದುಪಯೋಗ ಮಾಡಿಕೊಳ್ಳುವಂತೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಮನವಿ ಮಾಡಿದರು.

ಶ್ರೀ ಗಣೇಶ ಸೇವಾ ಟ್ರಸ್ಟ್ ಅದ್ಯಕ್ಷ ಶಿಕಾರಿಪುರ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು.

ವಂದೇ ಮಾತರಂ ಸೌಹಾರ್ದ ಸೊಸೈಟಿ ಅಧ್ಯಕ್ಷ ಎಂ ವಾಸುದೇವ ಭಟ್ ಅವರು ಮಾತಾನಾಡಿ ಶುಭ ಹಾರೈಸಿದರು. ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಹನಾ ಶೆಟ್ಟಿ ಅವರು ಮಾರ್ಗದರ್ಶನ ಮಾಡಿದರು. 

   ಧರ್ಮದರ್ಶಿಗಳಾದ  ಜಿ.ಕೆ ಭಟ್ ಮತ್ತು ಡಾ. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕೆ ಯೋಗೀಶ್ ಪೈ ಸ್ವಾಗತಿಸಿದರು, ಸುಮಾ ಪೈ ಪ್ರಾರ್ಥಿಸಿದರು. ರೋಹನ್ ಅತಿಕಾರಿಬೆಟ್ಟು ವಂದಿಸಿದರು.

Post a Comment

0 Comments