ನಿಧನ ಪ್ರಭಾವತಿ ಆಚಾರ್ಯ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ: ಪ್ರಭಾವತಿ ಆಚಾರ್ಯ

ಮೂಡುಬಿದಿರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ  ದೇವಸ್ಥಾನದ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಪುತ್ತಿಗೆಮನೆ ಎಂ. ಗೋಪಾಲ ಆಚಾರ್ಯರ ಪತ್ನಿ ಪ್ರಭಾವತಿ ಜಿ. ಆಚಾರ್ಯ (75) ಅವರು ಬುಧವಾರ ಮುಂಜಾನೆ ನಿಧನ ಹೊಂದಿದರು. 

 ಮೂಡುಬಿದಿರೆ ಇನ್ನರ್ ವೀಲ್  ಕ್ಲಬ್ ನಲ್ಲಿ ಸಕ್ರಿಯರಾಗಿದ್ದಾಗ ಪಲ್ಸ್ ಪೋಲಿಯೋ ಕುರಿತಾದ ಪ್ರಹಸನ ಸಹಿತ ಮನೆ ಮನೆಗೆ ಮಾಹಿತಿ ನೀಡುವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 

ಆನೆಗುಡ್ಡೆ ಚರ್ಚ್ ನಲ್ಲಿ ನಡೆದ ಪ್ರಹಸನಕ್ಕೆ ಪಲ್ಸ್ ಪೋಲಿಯೋ ರಾಷ್ಟ್ರೀಯ   ಸಮಿತಿಯಿಂದ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ ಬಂದಿರುವುದು ಉಲ್ಲೇಖನೀಯ.

ಪ್ರಭಾವತಿ ಅವರು ಪುತ್ರರಾದ ಮೂಡುಬಿದಿರೆ ಕಮಲ್ ಜ್ಯುವೆಲ್ಸ್ ನ ಸುದರ್ಶನ, ರಾಜೇಶ್ ಮತ್ತು ಮೂವರು ಪುತ್ರಿಯರನ್ನು  ಅಗಲಿದ್ದಾರೆ.

Post a Comment

0 Comments