ಮಂಜುಶ್ರೀ ಡ್ರೈವಿಂಗ್ ಸ್ಕೂಲ್: ಉಚಿತ ವಾಹನ ಚಾಲನಾ ತರಬೇತಿ
ಮೂಡುಬಿದಿರೆ: ಇಲ್ಲಿನ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಮತ್ತು ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ 36ಮಂದಿಗೆ ಉಚಿತ ವಾಹನ ಚಾಲನಾ ತರಬೇತಿಯನ್ನು ನೀಡಲಾಗುತ್ತಿದ್ದು ಇದುವರೆಗೆ ಕಳೆದ 24 ವರ್ಷಗಳಲ್ಲಿ 962 ಮಂದಿಗೆ ಇದುವರೆಗೆ ತರಬೇತಿ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲೂ ಈ ಯೋಜನೆಯನ್ನು ಮುಂದುವರಿಸಲಾಗಿದೆಯೆಂದು ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ನ ಪ್ರಾಂಶುಪಾಲರಾದ ಶೋಭಾ ಎಸ್. ಹೆಗ್ಡೆ ತಿಳಿಸಿದ್ದಾರೆ.
ಈ ಸಾಲಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಲಯನ್ಸ್ ಜಿಲ್ಲೆ 317ಡಿಯ ರಾಜ್ಯಪಾಲ ಲ. ಮೆಲ್ವಿನ್ ಡಿಸೋಜ ಹಸ್ತಾಂತರಿಸಿದರು. ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಲ. ಜೊಸ್ಸಿ ಮಿನೇಜಸ್, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಖಜಾಂಚಿ ಹರೀಶ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.
0 Comments