ಮೂಡುಬಿದಿರೆ: ಬಂಟರ ಸಂಘ ಮಹಿಳಾ ಘಟಕದ ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಬಂಟರ ಸಂಘ ಮಹಿಳಾ ಘಟಕದ ವಾರ್ಷಿಕೋತ್ಸವ 


ಮೂಡುಬಿದಿರೆ: ಬಂಟರ ಸಂಘ ಮೂಡುಬಿದಿರೆ ಮಹಿಳಾ ಘಟಕದ ಮೂಡುಬಿದಿರೆ ಇದರ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ವಿದ್ಯಾಗಿರಿಯ   ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಶನಿವಾರ ನಡೆಯಿತು. 

ಮಹಿಳಾ ಘಟಕದ ಅಧ್ಯಕ್ಷೆ  ಶೋಭಾ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ)ನ  ಅಧ್ಯಕ್ಷ                        ಡಾ. ಎಂ. ಮೋಹನ್ ಆಳ್ವ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

 ನಂತರ ಮಾತನಾಡಿದ ಅವರು ಬಂಟ ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಅಪೂರ್ವ ವಾದದ್ದು. ಬಹಳ ಹಿಂದಿನ ಕಾಲದಿಂದಲೂ ಮಹಿಳೆಯರಿಗೆ ಪ್ರಾಧಾನ್ಯತೆಯನ್ನ ನೀಡುತ್ತಾ ಬಂದಿರುವಂತಹ ಸಮಾಜವೆಂದರೆ ಅದು ಬಂಟ ಸಮಾಜವೆಂದರು. 

 ಬಂಟರ ಸಂಘ ಮೂಡುಬಿದರೆ (ರಿ) ಇದರ ಅಧ್ಯಕ್ಷ  ತಿಮ್ಮಯ್ಯ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ  ಜಯಶ್ರೀ ಅಮರನಾಥ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಬಂಟ್ವಾಳ ಬಂಟರ ಸಂಘದ  ಅಧ್ಯಕ್ಷ ಚಂದ್ರಹಾಸ ಶೆಟ್ಟಿ,  ಸಿ.ಎಂ. ಡಿ , L D S  infotech private Ltd Mumbai ಇದರ ಅಮರನಾಥ ಶೆಟ್ಟಿ ಹಂಡಿಂಜೆ ಗುತ್ತು,  ಡಾ. ಅಮರಶ್ರೀ ಅಮರನಾಥ್ ಶೆಟ್ಟಿ ,  ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಎಂ.ಪುರುಷೋತ್ತಮ ಶೆಟ್ಟಿ ,  ದಿವಾಕರ ಶೆಟ್ಟಿ ಅತಿಥಿಗಳಾಗಿ  ಭಾಗವಹಿಸಿದ್ದರು. 

ಸಂಪನ್ಮೂಲ ವ್ಯಕ್ತಿಯಾಗಿ ರಾಜೇಶ್ವರಿ ಡಿ.ಶೆಟ್ಟಿ, ಮಂಗಳೂರು  ಮಹಿಳಾ ಘಟಕದ ಕೋಶಾಧಿಕಾರಿ  ಗೀತಾ ಪಿ .ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸುಜಾತ ಶೆಟ್ಟಿ  ಸ್ವಾಗತಿಸಿದರು .  ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿ ಧನ್ಯವಾದಗೈದರು.

Post a Comment

0 Comments