ಮೂಡಬಿದಿರೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
ಮೂಡುಬಿದಿರೆ: ಸಾಹಿತ್ಯ ಮನುಷ್ಯನಲ್ಲಿ ಸಹೃದಯತೆ ಬೆಳೆಸುತ್ತಾ ಸಾಮರಸ್ಯದ ಬದುಕಿಗೆ ನೆರವಾಗುತ್ತದೆ ಎಂದು ಸಾಹಿತಿ ಕೃಷಿ ಪರಿಸರ ತಜ್ಞ ಡಾ ನರೇಂದ್ರ ರೈ ದೊರ್ಲ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಕೊರೊನಾ ಕಾಲಘಟ್ಟದ ನಂತರ ದಿನಗಳಲ್ಲಿ ಮನುಷ್ಯನ ಸಂಬಂಧಗಳು ಶಿಥಿಲಗೊಂಡಿದ್ದು ಇಂದು ಎಲ್ಲವನ್ನು ವ್ಯವಹಾರಿಕ ದೃಷ್ಟಿಕೋನದಿಂದಲೇ ನೋಡುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ವಿಷಾಧಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಡಾ. ಎಂಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಸಾಹಿತ್ಯದ ಕುರಿತು ಅಭಿರುಚಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ರಂಗಭೂಮಿ ಮತ್ತು ಕಿರುತೆರೆ ನಟ ಶ್ರೀಪತಿ ಮಂಜನಬೈಲು ಅತ್ಯಂತ ಯಶಸ್ವಿಯಾಗಿ ನಡೆದ ಸಮ್ಮೇಳನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವ ಸನ್ಮಾನ: ಇದೇ ಸಂದರ್ಭದಲ್ಲಿ ಅಬ್ದುಲ್ ಹಮೀದ್ ಪಕಲಡ್ಕ (ಸಾಹಿತ್ಯ ) ಧನಂಜಯ ಮೂಡುಬಿದಿರೆ (ಪತ್ರಿಕೋದ್ಯಮ) ಶಾಂತರಾಮ ಕೊಡ್ವ (ಯಕ್ಷಗಾನ )ಪುಷ್ಪ ಪರವ (ಜಾನಪದ ) ಪೌಸ್ತಿನ್ ಸಿಕ್ವೇರಾ ( ಕೃಷಿ) ಸಮಾಜ ಮಂದಿರ ಸಭಾ (ಸಂಘ ಸಂಸ್ಥೆ) ಇವರಿಗೆ ಗೌರವ ಸನ್ಮಾನ ನಡೆಸಲಾಯಿತು ಸಮಾಜ ಮಂದಿರದ ಪರವಾಗಿ ಕರ‍್ಯದರ್ಶಿ ಸುರೇಶ್ ಪ್ರಭು ಸನ್ಮಾನ ಸ್ವೀಕರಿಸಿದರು.
ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಖ್ಯಾತ ರಂಗನಿರ್ದೇಶಕ ಜೀವನರಾಮ್ ಸುಳ್ಯ, ಕಸಾಪದ ಕೇಂದ್ರೀಯ ಕರ‍್ಯಕಾರಿ ಸಮಿತಿ ಸದಸ್ಯ ಡಾ ಮಾಧವ ಎಂ ಕೆ, ಮಂಗಳೂರು ತಾಲೂಕು ಕ .ಸಾಪದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಮುಲ್ಕಿ ತಾಲೂಕು ಕ. ಸಾಪದ ಅಧ್ಯಕ್ಷ ಮಿಥುನ್ ಕೊಡೆತ್ತೂರು, ಜಿಲ್ಲಾ ಸಮಿತಿ ಸದಸ್ಯ ಪವನ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಕೋಶಾಧೀಕಾರಿ ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿzರು.À ಗೌರವ ಕರ‍್ಯದರ್ಶಿ ಸದಾನಂದ ನಾರಾವಿ ವಂದಿಸಿದರು. ಸದಸ್ಯ ಡಾ ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.
0 Comments