ಮೂಡುಬಿದಿರೆಯಲ್ಲಿ "ಕಥೆ ಎಡ್ಡೆಂಡು" ನಾಟಕದ 49 ನೇ ಪ್ರದರ್ಶನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ "ಕಥೆ ಎಡ್ಡೆಂಡು" ನಾಟಕದ 49 ನೇ ಪ್ರದರ್ಶನ 


ಮೂಡುಬಿದಿರೆ: ಟೀಂ ಬ್ಲ್ಯಾಕ್ ಸ್ನೀಪರ್ಸ್ ಒಂಟಿಕಟ್ಟೆ ಇದರ ಸೇವಾ ಕಾರ್ಯಗಳ ಪ್ರಯುಕ್ತ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಸಾರಥ್ಯದ ಶಾರದಾ ಕಲಾ ಆಟ್ಸ್ ೯ (ರಿ) ಮಂಜೇಶ್ವರ ಇವರಿಂದ ಭಾನುವಾರ ಸಂಜೆ ಸಮಾಜ ಮಂದಿರದ ಬಯಲು ರಂಗಮಂದಿರದಲ್ಲಿ ತುಳುವ ಸೌರಭ ಪ್ರಕಾಶ್ ಕೆ.ತೂಮಿನಾಡು ಅವರ ಅಭಿನಯದ   "ಕಥೆ ಎಡ್ಡೆಂಡು" ನಾಟಕದ 49 ನೇ ಪ್ರದರ್ಶನ ನಡೆಯಿತು.

  ಪುರಸಭಾ ಸದಸ್ಯ ನಾಗರಾಜ ಪೂಜಾರಿ 49 ನೇ ಪ್ರದರ್ಶನಕ್ಕೆ ಚಾಲನೆಯನ್ನು ನೀಡಿದರು.



   ಒಂದು ಅತ್ಯುತ್ತಮ  ಕಥೆಯನ್ನು ಹೆಣೆದು ರಂಗಭೂಮಿಗೆ ತಂದು  ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ  ನಾಟಕ ರಚನೆಕಾರ ಜೆ.ಪಿ.ತೂಮಿನಾಡು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಂಗಭೂಮಿ ಕಲಾವಿದರಾದ ರಮೇಶ್ ಶೆಟ್ಟಿ, ಸುಧಾಕರ ಶೆಟ್ಟಿ,ಟೀಂ ಬ್ಲ್ಯಾಕ್  ಸ್ನೀಪರ್ಸ್ ನ ಕಿಶೋರ್ ಒಂಟಿಕಟ್ಟೆ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು,  ಮತ್ತಿತರರು ಈ ಸಂದರ್ಭದಲ್ಲಿದ್ದರು.

Post a Comment

0 Comments