ತ್ರಿಶೂಲ್ ಫ್ರೆಂಡ್ಸ್ ಬೆದ್ರ ಸಂಘಟನೆ ಉದ್ಘಾಟನೆ
ಮೂಡುಬಿದಿರೆ: ಬಡವರ, ಅಶಕ್ತರ ನೆರವಿಗಾಗಿ ಹುಟ್ಟಿಕೊಂಡಿರುವ ತ್ರಿಶೂಲ್‌ನ ಸಮಾಜ ಸೇವೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸಂಸ್ಥೆಯ ಗೌರವ ಅಧ್ಯಕ್ಷ ಅಶ್ವತ್ಥ ಪಣಪಿಲ ಎಂದರು. ಅವರು ಭಾನುವಾರ ಸಮಾಜ ಮಂದಿರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ `ತ್ರಿಶೂಲ್ ಫ್ರೆಂಡ್ಸ್ ಬೆದ್ರ' ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಮಾಜ ಸೇವೆಗಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕ ಅನಿಲ್ ಮೆಂಡೋನ್ಸಾ ಅವರು ಅಸಹಾಯಕರಿಗೆ ನೆರವಾಗಲು ಸಾಮಾಜಿಕ ಸಂಘ, ಸಂಸ್ಥೆಗಳು ಮುಂದೆ ಬರಬೇಕು. ಇಂತಹ ಸೇವೆಗಳನ್ನು ಮಾಡುವಾಗ ಯಾವುದೇ ಜಾತಿ, ಧರ್ಮ ನೋಡಬಾರದು ಎಂದರು.
ಸಂಸ್ಥೆಯ ಪ್ರಥಮ ಸೇವಾ ಯೋಜನೆಯಾಗಿ ಕೊಡಂಗಲ್ಲಿನ ಬಾಲಕೃಷ್ಣ ನಾಯಕ್ ಅವರಿಗೆ ವಾಕರ್(ನಡೆಯುವ ಸಾಧನ), ಅನಂತ ಮತಿ ಅವರಿಗೆ ಏರ್‌ಬೆಡ್ ಹಸ್ತಾಂತರಿಸಲಾಯಿತು. ತ್ರಿಶೂಲ್ ಫ್ರೆಂಡ್ಸ್ಗೆ ರಜನಿ ಶೆಟ್ಟಿ ರೂ.15 ಸಾವಿರ ದೇಣಿಗೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಸುಮಾರು 800ಕ್ಕೂ ಅಧಿಕ ಶ್ವಾನಗಳಿಗೆ ಆಹಾರ ನೀಡಿದ ಮಂಗಳೂರಿನ ಸಮಾಜ ಸೇವಕಿ, ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ತ್ರಿಶೂಲ್ ಫ್ರೆಂಡ್ಸ್ನ ಅಧ್ಯಕ್ಷ ರಕ್ಷಿತ್ ಪೂಜಾರಿ ಅಧ್ಯಕ್ಷತೆ ವಹಿಸಿದರು. ಪುರಸಭಾ ಸದಸ್ಯೆ ಜಯಶ್ರೀ, ತ್ರಿಶೂಲ್ ಫ್ರೆಂಡ್ಸ್ ಬೆದ್ರ ಇದರ ಲೋಗೊ ಅನಾವರಣಗೊಳಿಸಲಾಯಿತು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರೇಖಾ ಸಾಲ್ಯಾನ್ ಉಪಸ್ಥಿತರಿದ್ದರು.
ಶ್ರೀರಾಜ್ ಸನಿಲ್ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ಶೆಟ್ಟಿಗಾರ್ ಸ್ವಾಗತಿಸಿದರು. ಆಶಿಶ್ ವಂದಿಸಿದರು.
0 Comments