ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ: ಮಿಜಾರಿನಲ್ಲಿ ಉಚಿತ ಫಲಾಹಾರ
ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ನಿಮಿತ್ತ ಮಿಜಾರು ಬೈತರಿ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ "ಶ್ರೀ ಕೃಷ್ಣ " ಹೊಟೇಲಿನಲ್ಲಿ ಉಚಿತ ಫಲಾಹಾರ ಕಾಫಿ ನಡೆಯಿತು.
ಹೊಟೇಲ್ ನ ಮಾಲಕ ಅಮ್ಮಿ ಯಾನೆ ರಘುವೀರ ಮಿಜಾರ್ ಅವರು ಈ ಕೊಡುಗೆಯನ್ನು ನೀಡಿದವರು.
ಅಮ್ಮಿ ಅವರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನ ಉಚಿತ ಆಹಾರ ವಿತರಣೆ ಮಾಡುತ್ತಾ ಬರುತ್ತಿದ್ದಾರೆ.
ಪ್ರತಿ ಬಾರಿಯೂ ಸಾಧಾರಣ 150 ರಿಂದ 200 ಜನ ಅವರ ಖಾಯಂ ಗಿರಾಕಿಗಳು ಇರುತ್ತಾರೆ. ಒಬ್ಬರು ಎಷ್ಟು ಬೇಕಾದರೂ ಯಾವುದೇ ತಿಂಡಿಯನ್ನು ತಿನ್ನಬಹುದು ಆದರೆ ಮನೆಗೆ ಒಯ್ಯುವಂತಿಲ್ಲ.
ಅಶ್ವತ್ಥಪುರದಲ್ಲಿ ಅಯೋಧ್ಯಾ ಸಂಭ್ರಮೋತ್ಸವ
ಮೂಡುಬಿದಿರೆ, ಜ.22: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಂಗಳವಾರ ಅಯೋಧ್ಯಾ ಸಂಭ್ರಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಸೋಮವಾರದಿಂದ ಏಕಾಹ ಶ್ರೀ ರಾಮನಾಮ ನಡೆಯಿತು. ಇಂದು ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆ ವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪವಮಾನ ಪಂಚಾಮೃತ ಅಭಿಷೇಕ, ಸಹಸ್ರ ತುಳಸಿ ಅರ್ಚನೆ ನಡೆಯಿತು.
ಅಯೋಧ್ಯೆಯಲ್ಲಿ ನಡೆದ ಶ್ರೀ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಸುಮುಹೂರ್ತದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ರಾತ್ರಿ ದೀಪೋತ್ಸವ ಸಹಿತ ಪಲ್ಲಕಿ ಉತ್ಸವ, ಪುಷ್ಪರಥೋತ್ಸವ ನಡೆಯಿತು.
ಕೋಟೆಬಾಗಿಲು ದೇವಸ್ಥಾನದಲ್ಲಿ ವಿಶೇಷ ಪೂಜೆ
ಮೂಡುಬಿದಿರೆ:ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಮಹಿಳಾ ಸಂಘದ ಸದಸ್ಯರಿಂದ ಭಜನೆ ಸಂಕೀರ್ತನೆ ನಡೆಯಿತು. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೀಪಾಲಂಕಾರ ಬಳಿಕ ಮಹಾಪೂಜೆ ನಡೆಯಿತು. ದೇವಸ್ಥಾನ ಕಾರ್ಯದರ್ಶಿ ಶೇಖರ್ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ, ಕಾರ್ಯದರ್ಶಿ ಪ್ರಣಿಲ್ ಹೆಗ್ಡೆ, ಮೂಡುಬಿದಿರೆ ವಲಯ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಕೆ. ಹೆಗ್ಡೆ, ಕಾರ್ಯದರ್ಶಿ ಮಮತ ಆರ್.ಹೆಗ್ಡೆ, ಪುರಸಭೆ ಮಾಜಿ ಸದಸ್ಯ ವಿಜಯ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
0 Comments