ಮೋದಿ ಮಹಿಳೆಯರ ಗೌರವ ಮತ್ತು ಆರೋಗ್ಯ ಎರಡನ್ನೂ ಕಾಪಾಡಿದ್ದಾರೆ:ಸುನಿಲ್ ಪಣಪಿಲ
ಪ್ರಧಾನಿ ನರೇಂದ್ರ ಮೋದಿಯವರು ದೂರದೃಷ್ಟಿಯ ಯೋಚನೆ ಹೊಂದಿರುವ ವ್ಯಕ್ತಿ. ಅವರ ಯೋಜನೆಗಳು ದೂರದೃಷ್ಟಿಯ ಚಿಂತನೆಗಳುಳ್ಳ ಯೋಜನೆಗಳಾಗಿದೆ. ಮನೆಮನೆಗೂ ಶೌಚಾಲಯ ನಿರ್ಮಾಣ ಯೋಜನೆ ತಂದು ಸ್ವಚ್ಚತೆಯ ಜೊತೆಗೆ ಮಹಿಳೆಯರ ಗೌರವವನ್ನೂ ಕಾಪಾಡಿದ್ದಾರೆ ಅದರ ಜೊತೆಗೆ ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ಯೋಜನೆ ತಂದು ಮಹಿಳೆಯರ ಆರೋಗ್ಯವನ್ನೂ ಕಾಪಾಡಿದ್ದಾರೆ ಎಂದು ಲೇಖಕ ಸುನಿಲ್ ಪಣಪಿಲ ರವರು ಹೇಳಿದರು.
ಅವರು ಗ್ರಾಮ ಪಂಚಾಯತಿ ನೆಲ್ಲಿಕಾರು ಇಲ್ಲಿ ನಡೆದ ವಿಕಸಿತ ಭಾರತ ಯಾತ್ರೆ ಎಂಬ ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಾರಾವಿ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಅಭಿಜಿತ್ ರವರು ಬ್ಯಾಂಕ್ ನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉದಯ್ ಪೂಜಾರಿ, ಉಪಾಧ್ಯಕ್ಷರಾದ ಸುಶೀಲಾ, ಸದಸ್ಯರಾದ ಜಯಂತ್ ಹೆಗ್ಗೆ, ಸುನಂದಾ, ಆಶಲತಾ, ಪ್ರತಿಮಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಇತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಸಿಬ್ಬಂದಿ ಪ್ರಶಾಂತ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments