ವಂದೇ ಭಾರತ್ ಪ್ರಾಯೋಗಿಕ ಓಡಾಟ ಯಶಸ್ವಿ-ಸಂಸದ ನಳಿನ್ ಫುಲ್ ಖುಷ್

ಜಾಹೀರಾತು/Advertisment
ಜಾಹೀರಾತು/Advertisment

 ವಂದೇ ಭಾರತ್ ಪ್ರಾಯೋಗಿಕ ಓಡಾಟ ಯಶಸ್ವಿ-ಸಂಸದ ನಳಿನ್ ಫುಲ್ ಖುಷ್

ಬಹು ನಿರೀಕ್ಷೆಯ ಮಂಗಳೂರು – ಮಡ್ಗಾಂವ್‌ ವಂದೇ ಭಾರತ್‌ ರೈಲು ಪರೀಕ್ಷಾರ್ಥ ಸಂಚಾರಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಚಾಲನೆ ಸಿಕ್ಕಿದೆ. ಇಂದು ಬೆಳಿಗ್ಗೆ 8.30 ಗಂಟೆಗೆ ಮಂಗಳೂರಿನಿಂದ ಗೋವಾಗೆ ತೆರಳಿದೆ. ಈ ವೇಳೆ ಖುದ್ದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ರವರೇ ಇದರ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು.



ಬೆಳಗ್ಗೆ 8:30ಕ್ಕೆ ಮಂಗಳೂರಿನಿಂದ ಹೊರಟ ರೈಲು ಮಧ್ಯಾಹ್ನ 1:15ರ ವೇಳೆಗೆ ಮಡಗಾಂವ್ ತಲುಪುವ ನಿರೀಕ್ಷೆ ಇದೆ. ಮತ್ತೆ ಇಂದು ಮಧ್ಯಾಹ್ನ 1:45ಕ್ಕೆ ಮಡಗಾಂವ್ ನಿಂದ ಹೊರಟು ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇರಲಿದೆ.ಮಂಗಳೂರು – ಗೋವಾ ನಡುವಿನ ವಂದೇ ಭಾರತ್‌ ರೈಲಿನ ಸದ್ಯದ ವೇಳಾಪಟ್ಟಿ ಪ್ರಕಾರ, ಮಂಗಳವಾರ ಹೊರತುಪಡಿಸಿ ವಾರದ 6 ದಿನ ಸಂಚಾರ ನಡೆಸಲಿದೆ.

Post a Comment

0 Comments