ಶ್ರೀ ಕ್ಷೇತ್ರ ಹನ್ನೆರಡು ಕವಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಡಿ.26ರಿಂದ ಬ್ರಹ್ಮಕಲಶೋತ್ಸವ
ಮೂಡುಬಿದಿರೆ: ಶ್ರೀ ಕ್ಷೇತ್ರ ಹನ್ನೆರಡುಕವಲು ಪ್ರಾಕಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಾಕೊಡೆ ಇಲ್ಲಿನ ಶ್ರೀ ಮಹಾಗಣಪತಿ, ಶ್ರೀ ಮಹಾದೇವಿ ಮತ್ತು ಶ್ರೀ ಪಂಚಲಿಂಗೇಶ್ವರ ದೇವರ ಹಾಗೂ ರಕ್ತೇಶ್ವರಿ ಸಪರಿವಾರ ದೈವಗಳ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಡಿ.26(ನಾಳೆಯಿಂದ)ರಿಂದ 28 ರವರೆಗೆ ನಡೆಯಲಿದೆ.
ಹಸಿರು ಹೊರೆಕಾಣಿಕೆ: ಡಿ.26ರಂದು ಮಧ್ಯಾಹ್ನ 2.00ಗಂಟೆಗೆ ಹೊರೆಕಾಣಿಕೆಯು ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಹೊರಟು ಮಹಾವೀರ ಕಾಲೇಜು, ಗಂಟಾಲ್ ಕಟ್ಟೆ ರಸ್ತೆಯಾಗಿ ನೆತ್ತೋಡಿಗೆ ತಲುಪುದು.ನಂತರ ಮಧ್ಯಾಹ್ನ 3.00ಕ್ಕೆ ನೆತ್ತೋಡಿಯಿಂದ ಹೊರೆಕಾಣಿಕೆಯು ಭವ್ಯ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರ ಹನ್ನೆರಡು ಕವಲಿಗೆ ತಲುಪಲಿದೆ.
ಉದ್ಯಮಿ ಕೆ.ಶ್ರೀಪತಿ ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಾರೂರು ಖಂಡಿಗದ ವೇದಮೂರ್ತಿ ರಾಮದಾಸ ಅಸ್ರಣ್ಣ, ಶಾಸಕ ಉಮಾನಾಥ ಎ.ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಉಪಸ್ಥಿತರಿರುವರು. ಮಾರೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ, ಹೊಸಂಗಡಿ ಅರಮನೆಯ ಸಂಪತ್ ಕುಮಾರ್ ಹೆಚ್ ಮೆರವಣಿಗೆಯನ್ನು ಸ್ವಾಗತಿಸಲಿದ್ದಾರೆ.
0 Comments