ಸ್ವಸ್ತಿ ಶ್ರೀ ಪ.ಪೂ. ಕಾಲೇಜು:
ಮಾಸಿಕ ಉಪನ್ಯಾಸ ಮಾಲಿಕೆ
ಮೂಡುಬಿದಿರೆ : ಶ್ರೀ ಮಠದ ಭಟ್ಟಾರಕ ಭವನ ದಲ್ಲಿ ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜಿನ ವತಿಯಿಂದ
ಮಾಸಿಕ ಉಪನ್ಯಾಸ ಮಾಲಿಕೆ ಅಂಗವಾಗಿ 'ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ' ಕುರಿತು ಕಾರ್ಯಕ್ರಮ ನಡೆಯಿತು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಯವರ ಅಧ್ಯಕ್ಷ ತೆಯಲ್ಲಿ ಅಮೇರಿಕಾ ನ್ಯೂಜೆರ್ಸಿಯ ಉದ್ಯಮಿ, ರೋಟರಿ ಸದಸ್ಯ ಕುಮಾರ್ ಶಾಹಾ ಕಾರ್ಯಕ್ರಮ ಉದ್ಘಾಟಿಸಿದರು.
ಪಠ್ಯದೊಂದಿಗೆ ಸಾಮಾನ್ಯ ಜ್ಞಾನ ಹೊಂದುವ ಹುಮ್ಮಸ್ಸಿರುವ ಮಕ್ಕಳಿಗೆ ತಮ್ಮ ಜೀವನದಲ್ಲಿ ಮುನ್ನಡೆಯಲು ಸಹಕಾರಿ ಎಂದವರು ಹೇಳಿದರು.
ಮುಖ್ಯ ಅತಿಥಿ, ರಾಷ್ಟ್ರೀಯ ಅಂಗಾಂಗ ದಾನ ಪ್ರತಿಷ್ಠಾನದ ಅಧ್ಯಕ್ಷ ಲಾಲ್ ಗೋಯಲ್ ಅವರು ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಮಹತ್ವವನ್ನು ತಿಳಿಸಿಕೊಟ್ಟರು ಹಾಗೂ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಷಯಗಳಿಗೋಸ್ಕರ ಬಳಸಿಕೊಳ್ಳಬೇಕು ಎಂದು ಕಿವಿ ಮಾತನ್ನು ಹೇಳಿದರು.
ಆಶೀರ್ವಚನವಿತ್ತ ಭಟ್ಟಾರಕ ಸ್ವಾಮೀಜಿಯವರು ವಿದ್ಯಾರ್ಥಿ ಜೀವನ ಮಹತ್ವಪೂರ್ಣವಾಗಿದ್ದು ಉತ್ತಮ ನಡತೆ ಮಾತು ಸತತ ಪರಿಶ್ರಮ ದಿಂದ ಉತ್ತಮ ಶಿಕ್ಷಣಾರ್ಥಿಯಾಗಿ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯ ಎಂದು ನುಡಿದರು.
ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ಸಹಿತ ಸನ್ಮಾನಿಸಲಾಯಿತು.
ಡಾ ಸುದೀಪ್ , ಪಾರುಲ್ ಕುಮಾರರ ಪತ್ನಿ ಉಪಸ್ಥಿತರಿದ್ದರು.
ಸೌಮ್ಯಶ್ರೀ ನಿರೂಪಿಸಿದರು. ಹಿತೇಶ್ ರಾವ್ ವಂದಿಸಿದರು.
0 Comments