ಕಾಸರಗೋಡು: ಇತಿಹಾಸ ಪ್ರಸಿದ್ಧ ಕೇರಳದ ಕಾಸರಗೋಡು ಸಮೀಪದ ಕುಂಬಳೆ ಅನಂತಪುರ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಮೂಡಿತ್ತು. ಎಲ್ಲರೂ ದೇವರಲ್ಲಿ ಇನ್ನೊಂದು ಬಬಿಯಾ ಪ್ರತಿಬಿಂಬವನ್ನು ಕಾಣಲು ಕಾತುರದಿಂದ ಕಾಯುತ್ತಿದ್ದರು.
ಇದೀಗ ಭಕ್ತಾದಿಗಳ ಆಸೆಯಂತೆ ಅನಂತಪುರ ಕ್ಷೇತ್ರದಲ್ಲಿ ಮತ್ತೊಂದು ಮೊಸಳೆ ಕಾಣ ಸಿಕ್ಕಿದೆ. ಕ್ಷೇತ್ರದ ಆಡಳಿತ ಮಂಡಳಿ ಮೊಸಳೆ ಇರುವುದನ್ನು ಖಚಿತಪಡಿಸಿದೆ.
ಬ್ರಿಟಿಷ್ ಅವಧಿಯಲ್ಲಿ ಇಲ್ಲಿದ್ದ ಮೊಸಳೆಯನ್ನು ಬ್ರಿಟಿಷ್ ಅಧಿಕಾರಿಯೋರ್ವ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದ.ನಂತರ ಬಬಿಯಾ ಎಂಬ ಮೊಸಳೆ ಪತ್ತೆಯಾಗಿ ಅನೇಕ ವರ್ಷಗಳ ಕಾಲ ಜೀವಿಸಿತ್ತು. ಈಗ ಅದರ ಮರಣದ ಕೆಲವೇ ವರ್ಷದಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದ್ದು ಆಸ್ತಿಕರಲ್ಲಿ ನಂಬಿಕೆ ಹೆಚ್ಚಾಗುವಂತೆ ಮಾಡಿದೆ.
0 Comments