ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನ‌ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳ ದಿನ‌ ಆಚರಣೆ



ಮೂಡುಬಿದಿರೆಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರ ಇಲ್ಲಿ ಮಕ್ಕಳ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. 


ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಿದ್ದು ಎಲ್ಲಾ ಮಕ್ಕಳು ವಿವಿಧ ವೇಷಗಳನ್ನು ತೊಟ್ಟು ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿಪು ಣ್ಯಭೂಮಿ ತುಳುನಾಡ ಸೇವಾ ಪೌoಡೆಷನ್  ಟ್ರಸ್ಟ್ (ರಿ ) ಇದರ ಸ್ಥಾಪಕಾಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ. ಬಿ. ಸಿ. ರೋಡ್


ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ  ಜೋಸ್ಸಿ, ಮಿನೇಜಸ್,ಹೆಲ್ಪಿoಗ್ ಪ್ರೆಂಡ್ಸ್ ಇಸ್ರೇಲ್ ಇದರ ಸ್ಥಾಪಕಾಧ್ಯಕ್ಪರಾದ ಸುನಿಲ್ ಮೆಂಡೋನ್ಸ,ಇನ್ನರ್ ವ್ಹೀಲ್  ಕ್ಲಬ್ ಮೂಡುಬಿದಿರೆ  ಇದರ ಅಧ್ಯಕ್ಷೆ ಸರಿತಾ ಆಶಿರ್ವಾದ್,ಟೈಮ್ಸ್ ಆಫ್ ಕಾರ್ಕಳ ಇದರ ಪ್ರಶಾಂತ್ ಆಚಾರ್ಯ. ಲಯನ್ಸ್ ಕ್ಲಬ್ ಮೂಡಬಿದ್ರಿ ಇದರ ಕಾರ್ಯದರ್ಶಿಯಾದ ಓಸ್ವಾಲ್ ಡಿಕೋಸ್ತಾ, ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ.ಶೆಟ್ಟಿಗಾರ್ ಉಪಸ್ಥಿತರಿದ್ದರು.

ಶಿಕ್ಷಕಿ ಅನಿತಾ ರೋಡ್ರಿಗಸ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಲಕ್ಸ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.ನಳಿನಿ ವಂದಿಸಿದರು.

ಛದ್ಮವೇಶ ಸ್ಪರ್ಧೆಯ ತೀರ್ಪುಗಾರರಾಗಿ ನಾಗಶ್ರೀ ನಾಗರಕಟ್ಟೆ ಹಾಗೂ ಸಚಿನ್ ಪೂಜಾರಿ ನಂದಳಿಕೆ ಸಹಕರಿಸಿದರು.

ಹೆಲ್ಪಿoಗ್ ಪ್ರೆಂಡ್ಸ್ ಇಸ್ರೇಲ್ ವತಿಯಿಂದ ಎಲ್ಲಾ ಮಕ್ಕಳಿಗೆ ಉಡುಗೊರೆಗಳನ್ನು ಸುನಿಲ್ ಮೆಂಡೋನ್ಸ ವಿತರಿಸಿದರು. ಬೆಳಗ್ಗಿನ ಉಪಹಾರವನ್ನು ಎಮ್. ವಿ. ಶೆಟ್ಟಿ. ಕೆರೆಬಸದಿ  ಇವರು ಹಾಗೂ ಮಧ್ಯಾಹ್ನದ ಭೋಜನವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಜೋಸ್ಸಿ ಮಿನೆಜಸ್ ನೀಡಿ ಸಹಕರಿಸಿದರು.

Post a Comment

0 Comments