ಬಿಲ್ಲವ ಸಂಘಕ್ಕೆ ಅನುದಾನ ಬಿಡುಗಡೆ: ಸಂಸದರಿಗೆ ಅಭಿನಂದನೆ
ಬ್ರಹ್ಮ ಶ್ರೀ ನಾರಯಣ ಗುರು ಸೇವಾ ಸಂಘ (ರಿ) ಶಿರ್ತಾಡಿ ಇದರ ಸಭಾಭವನದ ಮುಂಬಾಗದ ಪ್ರಾಂಗಣಕ್ಕೆ ಸುಮಾರು 5 ಲಕ್ಷ ರೂ ಮೊತ್ತದ ಇಂಟರ್ ಲಾಕ್ ಅಳವಡಿಕೆಗೆ ಅನುದಾನ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ನಳೀನ್ ಕುಮಾರ್ ಕಟೀಲ್‌ರವರನ್ನು ಸಂಘದ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದಿರೆಯವರು, ಬಿಲ್ಲವ ಸಂಘದ ಪ್ರಮುಖರು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ರುಕ್ಕಯ ಪೂಜಾರಿ, ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ,ಲಕ್ಷ್ಮಣ ಕೋಟ್ಯಾನ್,ಸೋಮನಾಥ ಶಾಂತಿ ಕಂದಿರು,ಕೆ.ಅಶ್ವಥ್ ಪಣಪಿಲ ಜೊತೆಗಿದ್ದರು.p
0 Comments