*ರೋಟರಿ ಶಾಲೆಯಲ್ಲಿ ಗೀತಾ ಜಯಂತಿ
ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಸ್ವರ್ಣವಲ್ಲಿ ಸಂಸ್ಥಾನ ಸೋಂದಾ ಮತ್ತು ಸಂಸ್ಕೃತ ಭಾರತೀ ಕಾರ್ಕಳ ಇವರ ಸಹಯೋಗದೊಂದಿಗೆ ಗೀತಾ ಜಯಂತಿ ಮತ್ತು ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯ ವೈದ್ಯರಾದ ಡಾ. ಕಾರ್ತಿಕ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬದುಕಿನಲ್ಲಿ ಜಯ ಅಪಜಯ ಲಾಭ ನಷ್ಟಗಳು ಸಹಜ ಆಗ ನಾವು ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಾರದು. ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ.ಇದು ಮನೋವೈಜ್ಞಾನಿಕ ಗ್ರಂಥ ಎಲ್ಲರೂ ಕಲಿತು ಅರಿಯಿರಿ. ಗೀತೆಯು ನಮಗೆ ಮಾರ್ಗದರ್ಶಕವಾಗುತ್ತದೆ ಎಂದು ಹೇಳಿದ ಅವರು
ಸಂಸ್ಕೃತದಲ್ಲೇ ಮಾತಾಡಿ ಸರಳ ಸಂಸ್ಕೃತ ಹಾಗೂ ಭಗವದ್ಗೀತೆಯ ಜೀವನ ಮೌಲ್ಯದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಪಿ ಎಂ ಇವರು ಪ್ರತಿವರ್ಷವೂ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಆಶಿಸಿದರು.
ಹಿರಿಯರಾದ ನಿವೃತ್ತ ಯೋಧ ರಮೇಶ ಕಾರ್ಣಿಕ್ ಅತಿಥಿಯಾಗಿ ಭಾಗವಹಿಸಿದ್ದರು. ಇನ್ನೊರ್ವ ಅತಿಥಿ, ಕಾರ್ಯಕ್ರಮದ ಸಂಯೋಜಕ ಗಜಾನನ ಮರಾಠೆ ಸ್ವಾಗತಿಸಿದರು. ಆಡಳಿತಾಧಿಕಾರಿ ನಿತೇಶ್ ಕಾರ್ಯಕ್ರಮ ನಿರ್ವಹಿಸಿದರು. ತಿಲಕಾ ಅನಂತವೀರ ಜೈನ್ ಧನ್ಯವಾದಗೈದರು.
ನಿರ್ಣಾಯಕರಾಗಿ ಶಿಕಾರಿಪುರ ಈಶ್ವರಭಟ್, ಜಿ.ಕೆ ಭಟ್, ಶಂಕರ ಭಟ್, ವಸಂತಿ ಸಹಕರಿಸಿದರು.
ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಭಾರತೀ ಕಾರ್ಕಳ ಇದರ ಅಧ್ಯಕ್ಷ ಡಾ.ಪದ್ಮನಾಭ ಮರಾಠೆ ಮುಖ್ಯ ಅತಿಥಿಯಾಗಿ ಬಹುಮಾನ ವಿತರಿಸಿದರು.ರಮೇಶ ಕಾರ್ಣಿಕ್,ತಿಲಕಾ ಅನಂತವೀರ ಜೈನ್, ಗಜಾನನ ಮರಾಠೆ,ವೆಂಕಟ್ರಮಣ ಕೆರೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರೇಮಲತಾ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ಕನ್ನಡ ಅಧ್ಯಾಪಕಿ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು.
0 Comments